ಪಣಜಿ: ಗೋವಾ ಎಕ್ಸಪ್ರೆಸ್ ಎಸಿ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರವಾಸಿಯೋರ್ವರಿಗೆ ಹೃದಯಾಘಾತ ಸಂಭವಿಸಿದ ಘಟನೆ ನಡೆದಿದೆ. ಈ ಘಟನೆಯ ಕುರಿತು ಗ್ವಾಲಹೇರ್ ರೈಲ್ವೆ ನಿಲ್ದಾಣದಲ್ಲಿ ಈ ಮಹಿಳೆಯನ್ನು ಇಳಿಸಿ ಅಂಬುಲೆನ್ಸಗೆ ಕರೆ ಮಾಡಿ ಮಾಹಿತಿ ನೀಡಿದರೂ ಅಂಬುಲೆನ್ಸ ಬಾರದ ಕಾರಣ ನಂತರ ಖಾಸಗಿ ಅಂಬುಲೆನ್ಸ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತಾದರೂ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು ಎನ್ನಲಾಗಿದೆ.
ಮೃತ ಮಹಿಳೆಯ ಹೆಸರು ವಿಜಯ ಭಾರತಿ ಎನ್ನಲಾಗಿದೆ. ಈಕೆಯು ಪತಿ ರಾಜಬೀರ ಸಿಂಗ್ ರವರೊಂದಿಗೆ ಗೋವಾ ಎಕ್ಸಪ್ರೆಸ್ ರೈಲಿನ ಮೂಲಕ ಪುಣಾಕ್ಕೆ ಪ್ರಯಾಣ ಬೆಳೆಸಿದ್ದರು. ಟ್ರೇನ್ ಮೋರೆನಾ ತಲುಪಿದ ಸಂದರ್ಭದಲ್ಲಿ ಈಕೆಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಹೃದಯಾಘಾತದ ಶಂಕೆಯ ಹಿನ್ನೆಲೆಯಲ್ಲಿ ರೈಲಿನಿಲ್ಲಿದ್ದ ನೌಕರರು ಗ್ವಾಲಹೇರ್ ಸ್ಟೇಶನ್ಗೆ ಮಾಹಿತಿ ನೀಡಿದರು.
ಗ್ವಾಲಹೇರ್ ಸ್ಟೇಶನ್ನಲ್ಲಿ ಕೂಡಲೆ ಅಂಬುಲೆನ್ಸ ಬಾರದ ಕಾರಣ 50 ನಿಮಿಷ ರೈಲು ನಿಲ್ಲಿಸಿ ಖಾಸಗಿ ಅಂಬುಲೆನ್ಸ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎನ್ನಲಾಗಿದೆ.