ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮುದಾಯದ ಸಹಭಾಗಿತ್ವದಲ್ಲಿ ಶೈಕ್ಷಣಿಕ ವಿಭಾಗಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ SDMC ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವುಗಳಿಗೆ ಬಹುಮಾನದ ರೂಪದಲ್ಲಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡುವ ಪುಷ್ಟಿ ಯೋಜನೆಯನ್ನು ಜಾರಿಗೆ ತರಲಾಗಿದೆ.
ಕಳೆದ ಶೈಕ್ಷಣಿಕ ವರ್ಷದಿಂದ ಈ ಯೋಜನೆಯು SDMC ಸಮಿತಿಯವರು ಶಾಲೆಯ ಮಕ್ಕಳ ಹಾಜರಾತಿ ಹೆಚ್ಚಳ,ಶಿಕ್ಷಕರ ಹಾಜರಾತಿ,ಮೂಲಭೂತ ಸೌಕರ್ಯಗಳ ಬಗ್ಗೆ ಆದ್ಯತೆ,ಪಾಲಕರ-ಪೋಷಕರ ಸಭೆಗಳು, ಶಾಲಾ ಅನುದಾನಗಳ ಸರಿಯಾದ ಬಳಕೆ ಈ ಎಲ್ಲ ಗಮನಿಸುವ ಅಂಶಗಳು ಒಳಗೊಂಡಿವೆ. ಜೋಯಿಡಾ ತಾಲೂಕಿನ ರಾಮನಗರದ ಕ್ಲಸ್ಟರಿನ ಕಳೆದ ವರ್ಷ (2024-25ನೇ ಸಾಲಿನ)ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಚಿಕುಮಾರ ನಾಯರ ಹಾಗೂ ಸರ್ವ ಸದಸ್ಯರ ಸಮಿತಿ ಹಾಗೂ ಪಾಲಕರ,ಪೋಷಕರ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರ ಹಾಗೂ ಸಹ ಶಿಕ್ಷಕ ವೃಂದದವರ ಸಹಕಾರದಲ್ಲಿ ಪಡೆದುಕೊಂಡಿತ್ತು. ಈ ಬಾರಿ 2025-26 ನೇ ಸಾಲಿನ ರಾಮನಗರ ಕ್ಲಸ್ಟರಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ, ಉಪಾಧ್ಯಕ್ಷರಾದ ತನುಜಾ ಮಸೂರಕರ,ಸರ್ವ ಸದಸ್ಯರ,ಪಾಲಕರ- ಪೋಷಕರ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ,ಸಹ ಶಿಕ್ಷಕರಾದ ಆನಂದ ಪಿ,ವಿದ್ಯಾ ಮೇಡಂ ಎಲ್ಲರ ಸಹಕಾರದಿಂದ ಪಡೆದುಕೊಂಡಿರುತ್ತದೆ. ಗಮನಾರ್ಹ ಅಂಶವೆಂದರೆ ಸತತ ಎರಡು ವರ್ಷವೂ ರಾಮನಗರ ಕ್ಲಸ್ಟರಿನ ಹಿರಿಯ ಪ್ರಾಥಮಿಕ ಶಾಲೆಗಳು ತಾಲೂಕಾ ಮಟ್ಟದ ಪ್ರಶಸ್ತಿಯ ಗೌರವವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳು ಶೈಕ್ಷಣಿಕ ವಿಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಬೇಕೆನ್ನುವ ಬಯಕೆ,ಶೈಕ್ಷಣಿಕ ಏಳಿಗೆಯ ಬಗ್ಗೆ ನಿರಂತರ ತುಡಿತ,ತಮ್ಮ ಜೊತೆ ಸೇವಾನಿರತ ಶಿಕ್ಷಕ ಬಂಧು, ಗುರುಮಾತೆಯರನ್ನು ಪ್ರೋತ್ಸಾಹಿಸುವ,ಹುರಿದುಂಬಿಸುವ ಪ್ರವೃತ್ತಿಯ ಗುಣ,ಕಷ್ಟ ಸುಖದಲ್ಲಿಯೂ ಸ್ಪಂದಿಸುವ ಸ್ಪಂದನಾ ಜೀವಿ,ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿಗಳೊಂದಿಗೆ ನಿರಂತರ ಸಂಪರ್ಕದ ಮೂಲಕ ಶಾಲೆಗಳ ಶೈಕ್ಷಣಿಕ ವಿಭಾಗದ ಅಭಿವೃದ್ಧಿಗೆ ಮಾರ್ಗದರ್ಶನ,ಸಹಕಾರ ಪಡೆಯುವ ಚಾಕಚಕ್ಯತೆ, ಎಲ್ಲರೊಂದಿಗೆ ಬೆರೆಯುವ ಮನೋಭಾವ,ಕಾಲಕಾಲಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ,ಸಲಹೆ,ಸೂಚನೆಗಳನ್ನು ಪಡೆಯುವುದು,ಶಾಲಾ ಚಟುವಟಿಕೆಗಳನ್ನು ವಾರ್ಷಿಕ ಕ್ರಿಯಾ ಯೋಜನೆಯ ಪ್ರಕಾರ ನಡೆಯುವಂತೆ ಮೇಲ್ವಿಚಾರಣೆ, ಕಾರ್ಯಕ್ರಮಗಳ ಆಯೋಜನೆಯ ಉಸ್ತುವಾರಿ ಸಮರ್ಪಕವಾಗಿ ನೋಡಿಕೊಳ್ಳುವುದು ಒಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮುದಾಯದ ಕೊಂಡಿಯಂತೆ ತಮ್ಮ ಸಮರ್ಪಣೆಯ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವದರ ಜೊತೆಗೆ ಎಲ್ಲರ ಸಹಕಾರದಿಂದ ರಾಮನಗರ ಕ್ಲಸ್ಟರಿನ ಶಾಲೆಗಳಿಗೆ ಸತತ ಎರಡನೇ ಬಾರಿ ಉತ್ತಮ SDMC ಪ್ರಶಸ್ತಿಯು ದೊರಕಿರುವುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ರಾಮನಗರ ಕ್ಲಸ್ಟರಿನ ಶಾಲೆಗಳಿಗೆ ಸತತ ಎರಡನೇಯ ಬಾರಿ ತಾಲೂಕಾ ಮಟ್ಟದ ಅತ್ಯುತ್ತಮ SDMC ಪ್ರಶಸ್ತಿ ದೊರಕಿರುವುದು,ಸಮುದಾಯದ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ,ಶಿಕ್ಷಕ ವೃಂದದವರ ಸಹಕಾರದಲ್ಲಿ,ಮುಂದಿನ ಇನ್ನೂ ಹೆಚ್ಚಿನ ಶೈಕ್ಷಣಿಕ ವಿಭಾಗದ ಸಾಧನೆಗೆ ಪ್ರೇರಣೆಯನ್ನು ನೀಡಿದೆ.(ಬಿ ಹೆಚ್ ಭಾಗವಾನ,ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು).
