ಸುದ್ದಿ ಕನ್ನಡ ವಾರ್ತೆ
ಕಾರವಾರ:ತಾಲೂಕಿನ ಮಾಜಾಳಿಯ ತನಿಖಾ ಠಾಣೆಯಲ್ಲಿ ಮಾನ್ಯ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗ, ಮಂಗಳೂರುರವರ ನಿರ್ದೇಶನ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ . ಕಾರವಾರ ರವರ ಮಾರ್ಗದರ್ಶನದಲ್ಲಿ ದಿನಾಂಕ : 05. ಮಾರ್ಚ್ 2026 ಗುರುವಾರ ಬೆಳಗಿನ ಜಾವ 01.20am ಸಮಯದಲ್ಲಿ ಸಿಬ್ಬಂದಿಗಳೊಂದಿಗೆ, ಕಾರವಾರ ಮಾಜಾಳಿ ತನಿಖಾ ಠಾಣೆಯಲ್ಲಿ ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನಗಳ ತಪಾಸಣೆ ನಡೆಸುತ್ತಿರುವಾಗ ಬಂದ ಖಚಿತ ಬಾತ್ಮಿ ಮೇರೆಗೆ ಒಂದು ದ್ವಿಚಕ್ರ ವಾಹನವು ಗೋವಾದಿಂದ ಕಾರವಾರದ ಕಡೆಗೆ ಬರುವುದು ಕಂಡುಬಂದಿದ್ದು, ದ್ವಿಚಕ್ರ ವಾಹನವನ್ನು ತಪಾಸಣೆ ನಡೆಸಿದಾಗ ಬಿಳಿಯ ಬಣ್ಣದ ಚೀಲದಲ್ಲಿ 750 ಮಿಲಿಯ 36 ಗೋವಾ ರಾಜ್ಯದ ಮದ್ಯದ ಬಾಟಲಿಗಳು (ಒಟ್ಟು: 27ಲೀ) ಪತ್ತೆಯಾಗಿರುತ್ತವೆ, ಆರೋಪಿತನು ಘಟನಾ ಸ್ಥಳದಿಂದ ಪರಾರಿಯಾಗಿದ್ದು ಪತ್ತೆಹಚ್ಚಿ ಬಂಧಿಸಬೇಕಾಗಿರುತ್ತದೆ. ದೊರೆತ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತುಪಡಿಸಿಕೊಂಡು ಅಬಕಾರಿ ಉಪ ಅಧೀಕ್ಷಕರು, ಕಾರವಾರ ಉಪ ವಿಭಾಗರವರಿಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಯಿತು .
