ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಉಳವಿಯಲ್ಲಿ ಗುಂದ ಮತ್ತು ಉಳವಿ ಗ್ರಾಮದ ವತಿಯಿಂದ ನಡೆದ ಹಿಂದೂ ಸಮಾವೇಶವನ್ನು ಶಿವಪುರದ ಶ್ರೀ ಚೆನ್ನಬಸವಾನಂದ ಸ್ವಾಮಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದೂ ಸಮಾವೇಶ ನಮ್ಮ ಧರ್ಮ ರಕ್ಷಣೆಗಾಗಿ ,ದೇಶದ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ, ಬಸವಣ್ಣನವರು ಬಹಳ ಹಿಂದಿನಿಂದಲೇ ಧರ್ಮ ಮತ್ತು ಹಿಂದೂಗಳ ರಕ್ಷಣೆಗಾಗಿ ಹೋರಾಡಿದವರು,ವಚನ ಸಾಹಿತ್ಯದ ಮೂಲಕ ಜನರಿಗೆ ಅರಿವನ್ನು ಮೂಡಿಸಿದವರು, ಅಂಥ ನೆಲದಲ್ಲಿ ಇಂದು ಹಿಂದೂ ಸಮಾವೇಶ ಆಗುತ್ತಿರುವುದು ಸಂತಸದ ಸಂಘತಿ ಎಂದರು.
ಗೋಪಾಲ ಭಟ್ಟ ಶಿವಪುರ ಮಾತನಾಡಿ ಹಿಂದೂ ಧರ್ಮ ಇದು ಸನಾತನ ಧರ್ಮ ,ನಾವು ದೇಶಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದೇವೆ, ಈಗಲೂ ಮಾಡುತ್ತಲೆ ಇದ್ದೇವೆ, ನಮ್ಮ ತಾಲೂಕಿನ ಜನರು ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ತಮ್ಮ ಮೂಲ ಸೌಕರ್ಯಗಳನ್ನೇ ಕಳೆದು ಕೊಂಡವರು, ಸುಪಾ ಡ್ಯಾಂ ಗಾಗಿ ಮನೆ ಕಳೆದು ಕೊಂಡವರು ಇದೆಲ್ಲವು ನಾವು ದೇಶಕ್ಕಾಗಿ ಮಾಡಿದ ತ್ಯಾಗವೇ, ಅದೆನೆ ಇರಲಿ ಎಲ್ಲದಕ್ಕಿಂತ ನಮ್ಮ ದೇಶ ,ನಮ್ಮ ಧರ್ಮ ಮೊದಲು ಎಂದರು.
ಗಣಪತಿ ಮೆಣಸುಮನೆ ಯಲ್ಲಾಪುರ ಮಾತನಾಡಿ ವಿಶ್ವ ಒಂದು ದೇಹವಾದರೆ ಭಾರತ ದೇಶ ಹೃದಯವಿದ್ದ ಹಾಗೆ, ನಮ್ಮ ದೇಶಕ್ಕೆ ಅದರದ್ದೆ ಆದ ಇತಿಹಾಸವಿದೆ, ನಾವೆಲ್ಲರೂ ನಮ್ಮ ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಡಬೇಕು ಎಂದರು.
ಪೂಜ್ಯ ಶಂಕರಯ್ಯ ಕಲ್ಮಠ ಶಾಸ್ತ್ರೀ ಮಾತನಾಡಿ ಎಲ್ಲಾ ಧರ್ಮಕ್ಕಿಂತ ನಮ್ಮ ಹಿಂದೂ ಧರ್ಮ ಶ್ರೇಷ್ಠವಾದದ್ದು, ನಾವು ಎಲ್ಲ ಧರ್ಮದವರನ್ನು ಒಂದೇ ಸಮಾನವಾಗಿ ನೋಡುತ್ತೇವೆ,ಹಿಂದೂ ಧರ್ಮದಲ್ಲಿ ನೂರಾರು ಜಾತಿಗಳು ಇದ್ದರು ನಾವೆಲ್ಲರೂ ಒಂದೇ ,ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಕರೆ ನೀಡಿದರು.
ಈ ಮೊದಲು ಉಳವಿ ಚೆನ್ನಬಸವಣ್ಣನ ದೇವಸ್ಥಾನದಿಂದ ವೀರಭದ್ರೇಶ್ವರ ಕೆರೆಯ ತನಕ ಜಾಥಾ ನಡೆಯಿತು.
ಈ ಸಂದರ್ಭದಲ್ಲಿ ಉಳವಿಯ ಮಂಜುನಾಥ ಮೋಕಾಶಿ, ಹಾಲಪ್ಪ ಚಕ್ರಸಾಲಿ, ಮೃತ್ಯುಂಜಯ ವಿಭೂತಿಮಠ, ನಂದಿಗದ್ದೆಯ ಅರುಣ ದೇಸಾಯಿ, ಸುದರ್ಶನ ಭಾಗ್ವತ್, ಮಹಾಬಲೇಶ್ವರ ಭಾಗ್ವತ್, ಪುರುಸೋ ಸಾವರಕರ್, ಮಂಜುನಾಥ ಭಾಗ್ವತ್,ಇತರರು ಇದ್ದರು.
