ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಪ್ರತಿಭಾವಂತ ಕ್ರೀಡಾಪಟುವಾದ ಸಂತೋಷ ದಿಲೀಪ್ ಮರಾಠಿಯವರು ಥೈಲ್ಯಾಂಡ್ ನಲ್ಲಿ 30 ನೇಯ ಅಂತರರಾಷ್ಟ್ರೀಯ ಅಥ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕ ಪಡೆದಿದ್ದಾರೆ.
ಸಂತೋಷ ಮರಾಠಿ 800 ಮೀಟರ್ ವೇಗದ ಓಟದಲ್ಲಿ 4 ನೇಯ ಸ್ಥಾನ ಪಡೆದಿದ್ದಾರೆ. ಅಲ್ಲದೇ 4*100 ಮೀಟರ್ ರಿಲೆಯಲ್ಲಿ ಬೆಳ್ಳಿಯ ಪದಕ ಪಡೆದು ಸಾಧನೆ ಮಾಡಿದ್ದಾರೆ. ಬಡ ಕುಟುಂಬದ ಹಿನ್ನೆಲೆಯ ಸಂತೋಷ ಮರಾಠಿಯವರು ಕ್ರೀಡಾ ಅರ್ಹತೆ ಸಾಧನೆಯಿಂದ, ಸಂಘ ಸಂಸ್ಥೆಗಳ, ಗಣ್ಯರ, ಸಾರ್ವಜನಿಕರ ನೆರವಿನಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕದೊಂದಿಗೆ ಸಾಧನೆ ಮಾಡಿದ್ದಾರೆ.
