ಸುದ್ದಿ ಕನ್ನಡ ವಾರ್ತೆ

ಅಹಮದಾಬಾದ್‌:ಸಾಬರಮತಿ ತಟದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಪೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಮೂರನೇ ಟಿ20 ವಿಶ್ವಕಪ್‌ನ್ನು ಗೆದ್ದಿತು.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಟೀಂ ಇಂಡಿಯಾ ಮೊದಲು ಭರ್ಜರಿಯ ಬ್ಯಾಟಿಂಗ್ ಮಾಡಿ ನಿಗದಿತ 20 ಓವರಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಗಳ ಭಾರೀ ಮೊತ್ತ ಕಲೆ ಹಾಕಿತು. ಭಾರತದ ಪರವಾಗಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟ್ ಮಾಡಿ 46 ಎಸೆತಗಳಲ್ಲಿ 89 ರನ್ ಗಳ ಸಿಡಿಲಾಟದ ಇನ್ನಿಂಗ್ಸ್ ಆಡಿದರು.ಇನ್ನೊಂದೆಡೆ ಇಶಾನ್ ಕಿಶನ್ 25 ಎಸೆತಗಳಲ್ಲಿ 54 ರನ್ ಗಳ ವೇಗದ ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು ವೇಗವಾಗಿ ಹೆಚ್ಚಿಸಿದರು.

ಆರಂಭಿಕ ಆಟಗಾರ ಅಭಿಷೇಕ ಶರ್ಮಾ 18 ಎಸೆತಗಳಲ್ಲಿ 52 ರನ್ ಗಳನ್ನು ಗಳಿಸಿದ್ದು ಟಿ20 ವಿಶ್ವಕಪ್‌ನಲ್ಲಿ ಸಂಯುಕ್ತ 2 ನೇ ಅತಿ ವೇಗದ ಅರ್ಧಶತಕವಾಗಿದೆ.ಕೊನೆಯಲ್ಲಿ ಶಿವಂ ದುಬೆ ಅಜೇಯ 26 ರನ್ ಗಳಿಸಿದರು. 256 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು159 ರನ್ ಗಳಿಗೆ ಆಲೌಟ್ ಆಯಿತು.96 ರನ್ ಗಳಿಂದ ವಿಜಯಿಯಾಯಿತು. ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ಬೌಲರ್ ಗಳ ಪರ ಜಸ್ಪ್ರೀತಾ ಬುಮ್ರಾ 4 ಓವರ್ ನಲ್ಲಿ 15 ರನ್ ನೀಡಿ 4 ವಿಕೆಟ್ ಕಬಳಿಸಿದರು. ಭಾರತದ ತಂಡವು ಮೂರನೇ ಟಿ20 ವಿಶ್ವಕಪ್‌ ಗೆದ್ದು ಕೋಟ್ಯಾಂತರ ಭಾರತೀಯರ ಕನಸು ನನಸು ಮಾಡಿತು.