Banner Ad

ಸುದ್ದಿ ಕನ್ನಡ ವಾರ್ತೆ

ದಾಂಡೇಲಿ:ನಗರದ ಕಾಳಿ ನದಿಯ ತಟದ ಮೂರನೇ ನಂಬರಿನ ಗೇಟ್ ಪಂಪಾಸು ಪ್ರದೇಶದಲ್ಲಿ ಬಾರೀ ಗಾತ್ರದ ಮೊಸೆಳೆಯ ಚಲನವಲನ ಆ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಭಯದ ವಾತಾವರಣವನ್ನು ನಿರ್ಮಿಸಿದೆ.

Banner Ad

ಮೊಸಳೆಗಳು ನದಿಯ ತಟದಲ್ಲಿನ ದಟ್ಟ ಪ್ರದೇಶದಲ್ಲಿನ ಸಂಚರಿಸುವ ಪ್ರಾಣಿಗಳನ್ನು ಹಿಡಿದು ಆಹಾರವನ್ನಾಗಿ ತಿನ್ನುವುದು ಸ್ಥಳೀಯರ ಗಮನಕ್ಕೆ ಬಂದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಸಳೆಗಳು ನದಿಯ ತಟದ ಪ್ರದೇಶದಲ್ಲಿ ಮಾತ್ರವಲ್ಲದೇ, ನಗರದ ಪ್ರದೇಶದಲ್ಲಿ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಇದರಿಂದ ರಾತ್ರಿಯ ವೇಳೆ ಮಕ್ಕಳು, ಹಿರಿಯರು ಹೊರಬರಲು ಹಿಂಜರಿಯುವಂತಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ.

Banner Ad