ಸುದ್ಧಿಕನ್ನಡ ವಾರ್ತೆ
Goa: ಗೋವಾ -ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ತುಲಿ ಸೇತುವೆಯ ಬಳಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನಗಳು ಸಿಲುಕಿಕೊಂಡು ಪರದಾಡುವಂತಾಗಿದೆ.(On the Goa-Belagavi National Highway, near Astuli Bridge, the road is completely damaged and vehicles are stuck.)  ಇಲ್ಲಿ ಕಿಲೋಮೀಟರ್ ವರೆಗೆ ವಾಹನಗಳು ಸಾಲಲ್ಲಿ ನಿಂತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಇದರಿಂದಾಗಿ ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ತುಲಿ ಸೇತುವೆಯ ಬಳಿ ವಾಹನ ಚಲಾಯಿಸುವುದು ಎಂದರೆ ಅಪಘಾತದ ಭಯ ಹುಟ್ಟಿಸುವಂತಾಗಿದೆ.

ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಸಂಖ್ಯೆಯಲ್ಲಿ ವಾಹನಗಳು ಓಡಾಟ ನಡೆಸುತ್ತದೆ. ಆದರೆ ಈ ಮಾರ್ಗ ಇದೀಗ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಅಸ್ತುಲಿ ಸೇತುವೆಯ ಬಳಿ ರಸ್ತೆ ಕೆಸರು ಗದ್ದೆಯಂತಾಗಿದೆ. ಕಳೆದ ವಾರವೂ ಇಲ್ಲಿ ಟ್ರಕ್ ಸಿಲುಕಿಕೊಂಡು ಸುಮಾರು 12 ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಇದೀಗ ಮತ್ತೆ ಮಳೆಯಾಗುತ್ತಿದ್ದು ಯಾವಾಗ ಬೇಕಾದರೂ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಮನೆ ಮಾಡಿದೆ. ಸರ್ಕಾರದ ಅಪೂರ್ಣ ಕಾಮಗಾರಿಗೆ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.(Now it is raining again and there is concern that the traffic on this route will be stopped anytime. People are cursing the incomplete work of the government.)