ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಡಿಗ್ರಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಾ ಪಂಚ ಗ್ಯಾರಂಟಿ ಯೋಜನೆಯ ವತಿಯಿಂದ ಗ್ಯಾರಂಟಿ ಯೋಜನೆಯ ಅರಿವು ಹಾಗೂ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೋಯಿಡಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪುರುಷೋತ್ತಮ ಕಾಮತ್ ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಎಲ್ಲ ಜನರಿಗೆ ಸಹಾಯವಾಗಿದೆ, ಮುಖ್ಯವಾಗಿ ಮಹಿಳೆರಿಗೆ ಹೆಚ್ಚಿನ ಆಧ್ಯತೆ ನೀಡಿ ಸರ್ಕಾರ ಉಚಿತ ಬಸ್ಸ, ಹಾಗೂ 2 ಸಾವಿರ ರೂ ದಿಂದ ಬಡ ಮಹಿಳೆಯರಿಗೆ ಸಹಾಯವಾಗಿದೆ, ಮಹಿಳಾ ದಿನಾಚರಣೆ ಅಂಗವಾಗಿ ಈ ಯೋಜನೆ ನೀಡಿದ ಸರ್ಕಾರದಕ್ಕೆ ಅಭಿನಂದಿಸುತ್ತೇನೆ ಎಂದರು.
ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಎಂ ಮಾತನಾಡಿ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ತಾ.ಪಂ ವತಿಯಿಂದ ಮಹಿಳೆಯರಿಗಾಗಿ ವಿವಿಧ ಸ್ವರ್ಧೆಗಳನ್ನು ಏರ್ಪಡಿಸಲಾಗಿದೆ ಎಲ್ಲರೂ ಭಾಗವಹಿಸಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗೌರವ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಜೋಯಿಡಾ ಬ್ಲಾಕ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಭವಾನಿ ಚಹ್ಹಾಣ,ಚನ್ನಮ್ಮಾ ಡೊಂಬರ, ಸಿಡಿಪಿಓ ಸಿದ್ದಲಿಂಗಲಪ್ಪ ಕೆ,ದತ್ತಾ ನಾಯ್ಕ, ಡಾ ಸುಜಾತಾ ಉಕ್ಕಲಿ,ಹೆಸ್ಕಾ ಎಇಇ ದೀಪಕ ನಾಯ್ಕ, ಇತರರು ಉಪಸ್ಥಿತರಿದ್ದರು.
