ಸುದ್ದಿಕನ್ನಡ ವಾರ್ತೆ
Goa: ಗೋವಾ-ಮುಂಬಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಪಳೂಣ ಎಂಬಲ್ಲಿನ ಪರಶುರಾಮ ಘಾಟ್ ನಲ್ಲಿ ತಡೆಗೋಡೆ ಕುಸಿದಿರುವುದರಿಂದ ಈ ಮಾರ್ಗ ಅಪಾಯಕಾರಿಯಾಗಿ ಪರಿಣಮಿಸಿದೆ. ( The Goa-Mumbai National Highway has become dangerous due to the collapse of a barrier at Parasurama Ghat at Chiplun.) ಮುನ್ನೆಚ್ಚರಿಕಾ ಕ್ರಮವಾಗಿ ಏಕಮುಖ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಕಳೆದ ಎರಡು ದಿನಗಳಿಂದ ಕೊಂಕಣದಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಭಾರಿ ಮಳೆಯು ಇದೀಗ ಅವಾಂತರ ಸೃಷ್ಠಿಸಿದೆ.
ಭಾರಿ ಮಳೆಯಿಂದಾಗಿ ಗೋವಾ-ಮುಂಬಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ ಈ ಭಾರಿ ರಕ್ಷಣಾ ತಡೆಗೋಡೆ ಕುಸಿತವುಂಟಾಗಿ ವಾಹನ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ. ಈ ಬೃಹತ್ ತಡೆಗೋಡೆ ಕುಸಿತಗೊಂಡಿರುವುದರಿಂದ ಈ ತಡೆಗೋಡೆ ನಿರ್ಮಾಣದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದುರಾಗಿದೆ.
ಈ ತಡೆಗೋಡೆ ಕುಸಿಯುವ ಸಂದರ್ಭದಲ್ಲಿ ಈ ಹೆದ್ದಾರಿಯ ಬದಿಯಿಂದ ಯಾವ ವಾಹನಗಳೂ ಓಡಾಟ ನಡೆಸುತ್ತಿಲ್ಲವಾದ್ದರಿಂದ ಅದೃಷ್ಠವಶಾತ್ ದೊಡ್ಡ ಅವಘಡವೇ ತಪ್ಪಿದಂತಾಗಿದೆ. (Fortunately, no major accident was avoided as no vehicles were plying on this side of the highway when the barrier collapsed.)