ಸುದ್ದಿಕನ್ನಡ ವಾರ್ತೆ
Goa: ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಶೀಘ್ರದಲ್ಲಿಯೇ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ. ( The world famous Dudhasagar Falls will soon be open to tourists) ದೂಧಸಾಗರ ಜಲಪಾತಕ್ಕೆ ತೆರಳಲು ಟ್ಯಾಕ್ಸಿ ಸೇವೆ ಸೋವಾರದಿಂದ ಆರಂಭಗೊಳ್ಳಳಿದೆ. ದೂಧಸಾಗರ ಪ್ರವಾಸೋದ್ಯಮ ಆರಂಭಕ್ಕೆ ಸಂಭಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಸಂಬಂಧಿತ ಅಧಿಕಾರಿಗಳೊಂದಿಗೆ ಬೈಠಕ್ ನಡೆಸಿ ಚರ್ಚಿಸಿದ್ದಾರೆ.
ದೂಧಸಾಗರ ಜಲಪಾತ ವೀಕ್ಷಣೆಗೆ ಮಳೆಗಾಲದ ಸಂದರ್ಭದಲ್ಲಿ ಸಂಪೂರ್ಣ ನಿರ್ಬಂಧ ಹೇರಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತ ಅಪಾಯದ ಮಟ್ಟ ಮೀರಿ ಧುಮ್ಮಿಕ್ಕಿ ಹರಿಯುತ್ತದೆ. ( During the rainy season, this waterfall overflows beyond the danger level) ಇದರಿಂದಾಗಿ ಮಳೆ ಕಡಿಮೆಯಾಗುತ್ತಿದ್ದಂತೆಯೇ ಅಂದರೆ ಅಕ್ಟೋಬರ್ ತಿಂಗಳಿಂದ ದೂಧಸಾಗರ ಪ್ರವಾಸೋದ್ಯಕ್ಕೆ ಚಾಲನೆ ನೀಡಲಾಗುತ್ತದೆ. ಪ್ರಸಕ್ತ ವರ್ಷ ಗೋವಾದಲ್ಲಿ ಮತ್ತು ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗಿದೆ. ಇನ್ನೂ ಕೂಡ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ದೂಧಸಾಗರ ಜಲಪಾತ ವೀಕ್ಷಣೆಗೆ ತೆರಳು ರಸ್ತೆ ಹೆಚ್ಚಿನ ಪ್ರಮಾಣದಲ್ಲಿ ಹೊಂಡ ಬಿದ್ದಿದೆ. ಇದರಿಂದಾ ಈ ಭಾಗದ ರಸ್ತೆ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಈ ಕಾಮಗಾರಿಯ ಮಾಹಿತಿಯನ್ನು ಪಡೆದುಕೊಂಡರು.
ಪ್ರತಿ ವರ್ಷ ಗೋವಾದಲ್ಲಿ ಅಕ್ಟೋಬರ್ 1 ರಿಂದ ಪ್ರವಾಸಿ ಸೀಜನ್ ಆರಂಭಗೊಳ್ಳುತ್ತದೆ.( Every year the tourist season starts from 1st October in Goa.) ಆದರೆ ಪ್ರಸಕ್ತ ವರ್ಷ ಅಕ್ಟೋಬರ್ ತಿಂಗಳಲ್ಲಿಯೂ ಭಾರಿ ಮಳೆಯಾಗುತ್ತಿದೆ. ಈ ಹಿಂದೆ ದೂಧಸಾಗರ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ ಹಲವು ಘಟನೆ ನಡೆದಿದೆ. ಇದರಿಂದಾಗಿ ದೂಧಸಾಗರ ಜಲಪಾತ ಪ್ರದೇಶದಲ್ಲಿ ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಹಹವೆಡೆ ಸೂಚನಾ ಫಲಕಗಳನ್ನೂ ಹಾಕಬೇಕು ಎಂಬ ಸೂಚನೆಯನ್ನೂ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೀಡಿದ್ದಾರೆ.
ದೂಧಸಾಗರ ಜಲಪಾತ ಪ್ರವಾಸಿಗರಿಗೆ ಶೀಘ್ರದಲ್ಲಿಯೇ ವೀಕ್ಷಣೆಗೆ ಅವಕಾಶ ಲಭಿಸಲಿದೆ. ಜಗತ್ಪ್ರಸಿದ್ಧ ದೂಧಸಾಗರ ಜಲಪಾತಕ್ಕೆ ದೇಶ ವಿದೇಶಿಯ ಪ್ರವಾಸಿಗರು ಪ್ರತಿದಿನ ಭೇಟಿ ನೀಡುವುದು ವಿಶೇಷವಾಗಿದೆ. ಆದರೆ ದೂಧಸಾಗರ ಜಲಪಾತದ ಕೆಲ ಸ್ಥಳ ತೀರಾ ಅಪಾಯಕಾರಿಯಾಗಿರುವುದರಿಂದ ಪ್ರವಾಸಿಗರು ತಮ್ಮ ಸುರಕ್ಷತೆಯನ್ನೂ ತಾವೇ ತೆಗೆದುಕೊಳ್ಳುವುದು ಬಹು ಮುಖ್ಯವಾಗಿದೆ.