Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ಮುಖ್ಯ ಮಂತ್ರಿಗಳು 17 ನೇ ಬಜೇಟ ಮಂಡನೆ ಮಾಡಿ ಇತಿಹಾಸ ನೀರ್ಮಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅನೇಕ ಅಭಿವೃದ್ಧಿ ಕೆಲಸಗಳನ್ನು ಸೇರ್ಪಡೆ ಮಾಡಲು ಈಗಾಗಲೇ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ. ಎಷ್ಟು ಸೇರ್ಪಡೆ ಆಗುತ್ತದೆ ಎನ್ನುವುದು ನಾಳೆ ಗೊತ್ತಾಗಲಿದೆ ಎಂದು ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದರು.

Banner Ad

ಅವರು ಜೊಯಿಡಾ ಪದವಿ ಕಾಲೇಜು ಸಭಾಂಗಣ ಮತ್ತು ಕೊಠಡಿಯ 1 ಕೋಟಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಜೊಯಿಡಾ ತಾಲೂಕ ಪ್ರವಾಸೋದ್ಯಮ ಆಕರ್ಷಣೆಯ ಕೇಂದ್ರವಾಗಿದೆ. ಇದಕ್ಕೆ ಬಜೇಟನಲ್ಲಿ ವಿಶೇಷ ಹಣ ನೀಡಲು ಸಲಹೆ ನೀಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಗೆ ಉದ್ಯೋಗ ಸೇರಿದಂತೆ ಅಭಿವೃದ್ಧಿಗೆ ಹೆಚ್ಚಿನ ಹಣ ಬರುವ ನೀರೀಕ್ಷೆ ಇದೆ. ಜೊಯಿಡಾದಲ್ಲಿ 257 ಹೊಂ ಸ್ಟೇ ಗಳು ಇದ್ದು ಇದು ಸ್ಥಳಿಯರ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದರು.

ಜೊಯಿಡಾದಲ್ಲಿ ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ದೂರದ ಪಟ್ಟಣಕ್ಕೆ ಶಿಕ್ಷಣಕ್ಕೆ ಕಳುಹಿಸದೇ ಈ ಕಾಲೇಜಿನಲ್ಲಿ ಕಲಿಸಬೇಕು. ಮುಂದೆ ಬಿಬಿಎ, ಎಮ್ ಬಿ ಎ ತರಗತಿಗಳು ಪ್ರಾರಂಭವಾಗಲಿದೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಹತ್ತಿರದಲ್ಲಿ ಬಡವರ ಮಕ್ಕಳ ಶಿಕ್ಷಣಕ್ಕೆ ಈ ಕಾಲೇಜು ಹೆಚ್ಚು ಉಪಯುಕ್ತವಾಗಿದೆ. ಗುಣಾತ್ಮಕ ಪ್ರೊಫೆಸರ್ ಇದ್ದಾರೆ. ಇದರ ಲಾಭ ತಾಲೂಕಿನ ಜನರಿಗೆ ಸಿಗಬೇಕು ಎಂದರು.

ಇಲ್ಲಿನ ಬುಡಕಟ್ಟು ಕುಣಬಿ, ಗೌಳಿ, ಹಾಲಕ್ಕಿ, ಮರಾಠಾ ಜನರು ಈ ನಿಸರ್ಗ ರಕ್ಷಣೆಗೆ ಕಾರಣರಾಗಿದ್ದಾರೆ. ಪರಿಸರದ ಜೊತೆಗೆ ಅವರ ಅಭಿವೃದ್ಧಿಯೂ ಅಷ್ಟು ಮುಖ್ಯವಾಗಿದೆ ಎಂದರು.

ಕೃಷಿ ಇಲಾಖೆಯಿಂದ 7 ಪವರ್ ಟಿಲ್ಲರ್ , 5 ಕೃಷಿ ಸಿಂಚನ, 250 ಎರೆಹುಳು ತೊಟ್ಟಿ ನಿರ್ಮಿಸಿದ ರೈತರಿಗೆ ಸರ್ಟಿಫಿಕೇಟ್ ಸೇರಿದಂತೆ ಹೊಲಿಗೆ ಯಂತ್ರ, ಬಡಿಗೆಯಂತ್ರ, ವಿತರಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಟಿ. ಸುಂದರ ಕಾರ್ಯಕ್ರಮ ನಿರ್ವಹಿಸಿದರು.

ತಹಶಿಲ್ದಾರ ಮಂಜುನಾಥ ಮುನ್ನಳ್ಳಿ, ಈ ಓ ಭಾರತಿ ಎನ್, ಹರಿಶ್ ಕುಮಾರ್ ಗೃಹ ಮಂಡಳಿ ಕಾರಾವಾರ, ಜ್ಯೋತಿ, ಉದಯ್ ಗ್ರಹ ಮಂಡಳಿ ಬೆಳಗಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟಿಲ್, ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ಕಾಲೇಜು ಸಮಿತಿ ಸದಸ್ಯರು, ಗಜೇಂದ್ರ ಗಾಂದ್ಲೆ. ವಿನಯ್ ದೆಸಾಯಿ, ರವಿ ರೆಡಕರ, ಪ್ರಸನ್ನ ಗಾವಡಾ, ಸುಭಾಷ ವೇಳಿಪ, ಮಂಜುನಾಥ ಮುಕಾಶಿ, ಅಂಜಲಿ ರಾಣೆ ಪ್ರಿನ್ಸಿಪಾಲೆ ಪ್ರಾಸ್ತಾವಿಕ ಮಾತನಾಡಿದರು. ರತ್ನಮ್ಮ ಸ್ವಾಗತಿಸದರು.

Banner Ad