ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಡಗಾಂವ -ಕಾರವಾರ ಹೆದ್ದಾರಿ ಎನ್ ಎಚ್-66 ರಲ್ಲಿ ಬಾರ್ಶೆ-ಪಾಡಿ ನಡುವೆ ಮಂಗಳವಾರ ಮಧ್ಯಾನ್ಹ ಎಲ್ ಪಿಜಿ ಟ್ಯಾಂಕರ್ ಅಪಘಾತ ಸಂಭವಿಸಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಈ ಅಪಘಾತದ ನಂತರ, ಮಡಗಾಂವ- ಕಾಣಕೋಣ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಂಚಾರವನ್ನು ಸುರಕ್ಷತಾ ಕಾರಣಗಳಿಗಾಗಿ ಕಾಣಕೋಣ-ಆಗೊಂದಾ-ಬೇತುಲ್ ಮೂಲಕ ತಿರುಗಿಸಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ, ರಾಜ್ಯ ಸರ್ಕಾರದ ತುರ್ತು ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ಮತ್ತು ವ್ಯವಸ್ಥೆಗಳು ಸ್ಥಳಕ್ಕೆ ತಲುಪಿವೆ.
ಈ ಸ್ಥಳದಲ್ಲಿ ಪೆÇಲೀಸರನ್ನು ಸಹ ನಿಯೋಜಿಸಲಾಗಿದೆ. ಕುಂಡೈನಿಂದ ಎಲ್ ಪಿಜಿ ಕಂಪನಿಯ ಕಾರ್ಮಿಕರು ಅಪಘಾತ ಸ್ಥಳಕ್ಕೆ ತಲುಪಿದ್ದಾರೆ. ಅಪಘಾತದ ನಂತರ, ಮಡಗಾಂವ-ಕಾಣಕೋಣ ಹೆದ್ದಾರಿಯಲ್ಲಿ ಭಾರೀ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇತರ ಸಂಚಾರವನ್ನು ಬೇರೆ ಮಾರ್ಗಕ್ಕೆ ಸ್ಥಳಾಂತರಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ನ್ನು ಕೆಲ ಗಂಟೆಗಳ ಕಾರ್ಯಾಚರಣೆಯ ನಂತರ ತೆರವುಗೊಳಿಸಿದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಚಾರ ಆರಂಭಗೊಂಡಿದೆ.
