ಸುದ್ದಿ ಕನ್ನಡ ವಾರ್ತೆ
ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಮಹಾನಗರ ಹಾಗೂ ಬೆಳಗಾವಿ ತಾಲೂಕ ಘಟಕದ ಸಂಯುಕ್ತ ಆಶ್ರಯದಲ್ಲಿ ರವಿವಾರ ದಿನಾಂಕ 1 -3 – 2026 ರಂದು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಗಳು ಬೆಳಗಾವಿಯ ಶ್ರೀಸಿದ್ಧರಾಮೇಶ್ವರ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದವು.
ಬೆಳಗಾವಿ ನಗರ ಹಾಗೂ ತಾಲೂಕಿನ 42 ಶಾಲೆಗಳಿಂದ 80 ವಿದ್ಯಾರ್ಥಿಗಳು ಹಾಗೂ 20 ಯುವಕ ಯುವತಿಯರು ಹಾಗೂ ಹಿರಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಅಭಿನಂದನಾ ಪತ್ರ ಪಡೆದುಕೊಂಡರು.
ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಶ್ರೀ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಚನಗಳ ಕಂಠಪಾಠದಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ವಚನಗಳು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುತ್ತ ಮಾನವನ ವ್ಯಕ್ತಿತ್ವಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಪ್ರಾರಂಭದಲ್ಲಿ ಹಿರಿಯ ಉಪಾಧ್ಯಕ್ಷ ಶ್ರೀ ಮೋಹನ ಗುಂಡ್ಲೂರ ವಚನ ಪ್ರಾರ್ಥನೆ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಸಿ.ಎಂ.ಬೂದಿಹಾಳ ಅವರು ಪ್ರಾಸ್ಥಾವಿಕ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಸಂಚಾರಿ ಗುರು ಬಸವ ಬಳಗದ ಸಂಚಾಲಕರಾದ ಶ್ರೀ ಮಹಾಂತೇಶ ತೋರಣಗಟ್ಟಿ ಅವರು ಸ್ಪರ್ಧೆಯ ನಿಯಮಗಳನ್ನು ಹಾಗೂ ನಿರ್ಣಾಯಕರ ಕರ್ತವ್ಯಗಳನ್ನು ವಿವರಿಸಿದರು. ವೇದಿಕೆಯ ಮೇಲೆ ಮಹಾನಗರ ಘಟಕದ ಅಧ್ಯಕ್ಷ ಶ್ರೀ ಎಸ್. ಜಿ.ಸಿದ್ನಾಳ, ತಾಲೂಕ ಘಟಕದ ಅಧ್ಯಕ್ಷ ಶ್ರೀ ಬಿ ಜಿ ವಾಲಿಇಟಗಿ, ಶ್ರೀ ಎಂ.ಎಂ ಬಾಳಿ, ಶ್ರೀ ರಾಜಶೇಖರ ಪಾಟೀಲ, ಶ್ರೀಮತಿ ಮಹಾನಂದಾ ಪರುಶೆಟ್ಟಿ ಇದ್ದರು. ಡಾ.ಶ್ರೀ ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರೂಪಿಸಿದರು.
ನಿರ್ಣಾಯಕರಾಗಿ ನಗರ ಹಾಗೂ ತಾಲೂಕ ಘಟಕಗಳ ಪದಾಧಿಕಾರಿಗಳಾದ ಶ್ರೀ ಆನಂದ ಕೊಂಡಗುರಿ, ಶ್ರೀ ಎಫ್. ಆರ್ ಪಾಟೀಲ, ಶ್ರೀ ಈರಣ್ಣ ಚಿನಗುಡಿ, ಶ್ರೀಸಿದ್ಧರಾಮ ಸಾವಳಗಿ, ಶ್ರೀಪ್ರವೀಣಕುಮಾರ ಚಿಕಲಿ, ಶ್ರೀ ಎನ್ ಎಫ್ ಉಪ್ಪೀನ, ಶ್ರೀಮತಿ ಶೋಭಾ ಶಿವಳ್ಳಿ, ಪ್ರೀತಿ ಮಠದ, ರಾಜಶ್ರೀ ಬೆಣಚನಮರಡಿ, ಭಾರತಿ ರಾಮಗುರವಾಡಿ, ನೇತ್ರಾವತಿ ರಾಮಾಪುರಿ ಕೆಂಪಣ್ಣ ರಾಮಾಪುರಿ, ಶ್ರೀ ಲಾಳಸಂಗಿ, ಶ್ರೀಬಸವರಾಜ ಮತ್ತಿಕೊಪ್ಪ, ಶ್ರೀ ಹುಬ್ಬಳ್ಳಿ ಶ್ರೀಮತಿ ಸಾವಕ್ಕ ಉಪ್ಪೀನ. ಶ್ರೀಮತಿ ಮಹಾದೇವಿ ಬೂದಿಹಾಳ ಹಾಗೂ ಶಿಕ್ಷಕರು ಕಾರ್ಯನಿರ್ವಹಸಿದರು.
ಹೆಚ್ಚು ವಚನ ಕಂಠಪಾಠ ಮಾಡಿ ಮೊದಲ ಮೂರು ಸ್ಥಾನ ಪಡೆದವರ ಹೆಸರು ಈ ಕೆಳಗಿನಂತಿವೆ.
1) ಕುಮಾರಿ ಖುಷಿ ಅನಿಲಕುಮಾರ ಹಿರೇಮಠ 218 ವಚನಗಳನ್ನುಹೇಳಿ (ಪ್ರಥಮ ಸ್ಥಾನ)
2) ಕುಮಾರ ಸಂಕೇತ ಮೇಟಿ 174 ವಚನಗಳು (ದ್ವಿತಿಯ ಸ್ಥಾನ)
3) ಕುಮಾರಿ ಲಾವಣ್ಯ ಜಗಜಂಪಿ 113 ವಚನಗಳು (ತೃತಿಯ ಸ್ಥಾನ) ಪಡೆದುಕೊಂಡರು.
