ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ,ದಕ್ಷಿಣ ಭಾರತದ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ನಿಮತ್ತ ಗುರುವಾರ ಅಪಾರ ಭಕ್ತ ಸಮೂಹಕ್ಕೆ ದೇವಿಯ ಸೇವೆಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಬೆಳಿಗ್ಗೆ 5 ಗಂಟೆಯಿಂದಲೇ ಭಕ್ತಾದಿಗಳು ಅಮನ ದರ್ಶನ ಪಡೆಯಲು ಭಕ್ತಿ ಪೂರ್ವಕವಾಗಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವಿಗೆ ಸೇವೆಯನ್ನು ಸಲ್ಲಿಸಿದರು.
ಫಾಲ್ಗುಣ ಶುದ್ಧ ದಶಮಿ, ಫೆ.26ರಿಂದ ಚತುರ್ದಶಿ ಸೋಮವಾರ, ಮಾರ್ಚ್ 2 ವರೆಗೆ ಭಕ್ತಾಧಿಗಳಿಗೆ ಸೇವೆಗಳು ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಭಕ್ತಾದಿಗಳು ಹಣ್ಣು-ಕಾಯಿ, ಕಾಣಿಕೆ, ಹರಕೆ, ತುಲಾಭಾರ ಮುಂತಾದ ಸೇವೆಗಳನ್ನು ಸಲ್ಲಿಸಲು ಬೆಳಿಗ್ಗೆ 5 ಘಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವಸ್ಥನಾದ ಆಡಳಿತ ಮಂಡಳಿಯಿಂದ ಅವಕಾಶ ಕಲ್ಪಿಸಲಾಗಿದೆ.
ಭಕ್ತಾದಿಗಳು ಹಣ್ಣು-ಕಾಯಿ,
ಕಾಣಿಕೆ, ಹರಕೆ, ತುಲಾಭಾರ, ಮುಂತಾದ ಸೇವೆಗಳನ್ನು ಶ್ರೀ ಮಾರಿಕಾಂಬಾ ದೇವಿಗೆ ಸಲ್ಲಿಸಿ ಭಕ್ತಿ ಪೂರ್ವಕವಾಗಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ತಾಯಿ ಶ್ರೀ ದೇವಿಯ ಸನ್ನಿಧಿಯಲ್ಲಿ ತಮ್ಮಆರಿಕೆ ಮಾಡಿಕೊಂಡರು.
ಅಲ್ಲದೇ ದೂರದ ಬೇರೆ ಬೇರೆ ಪ್ರದೇಶಗಳಿಂದ ಆಗಮಿಸಿದ ಭಕ್ತಾದಿಗಳಿಗೆ ಹಾಗೂ ಸ್ಥಳೀಯರಿಗೆ ಮರ್ಕಿ-ದುರ್ಗಿ ದೇವಸ್ಥಾನದಲ್ಲಿ ಬೇವಿನ ಉಡಿಗೆ ಸೇವೆ ಮುಂಜಾನೆ 6 ರಿಂದ ಸಂಜೆ 5 ಗಂಟೆಯವರೆಗೆ ಸೇವೆಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಹಲವಾರು ಜನ ಭಕ್ತಾಧಿಗಳು ಬೇವಿನ ಉಡಿಗೆ ಸೇವೆ ಮಾಡಿ ದೇವಿಯ ಕೃಪೆಗೆ ಪಾತ್ರರಾದರು.
ಬಂದಂತ ಭಕ್ತಾದಿಗಳು ಸಂತೋಷದಿಂದ ದೇವಿಗೆ ಪೂಜೆ ಸಲ್ಲಿಸಿ ಹೂವು ಕುಂಕುಮ ಜತೆಗೆ ತೀರ್ಥ ಪ್ರಸಾದ ಸ್ವೀಕರಿಸಿ ಸಂತೃಪ್ತಗೊಂಡರು.
ಒಟ್ಟಾರೆಯಾಗಿ ಶ್ರೀ ದೇವಿಯ ಎಲ್ಲಾ ರೀತಿಯ ಸೇವೆಗಳು ಅತ್ಯಂತ ಯಶಸ್ವಿಯಾಗಿ ಪೊಲೀಸರ ಬಿಗಿ ಭದ್ರತೆಯಲ್ಲಿ ಜರಗಿರುವುದು ವಿಶೇಷವಾಗಿತ್ತು.
ವೃದ್ಧರಿಗೆ, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಹರಿದು ಬಂದ ಲಕ್ಷಾಂತರ ಭಕ್ತರಲ್ಲಿ ವೃದ್ಧರಿಗೆ, ಅಂಗವಿಕಲರಿಗೆ ದೇವಿಯ ದರ್ಶನ ಪಡೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ವಿಐಪಿ ಪಾಸ್ ಪಡೆದವರಿಗೆ ಒಂದು ಪಾಸಿಗೆ 5 ಜನರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
