ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದ ಶಿವೋಲಿಯಲ್ಲಿ ಮಾದಕ ದ್ರವ್ಯ ನಿಗ್ರಹ ದಳ (ANC) ಧಾಳಿ ನಡೆಸಿ, ಕೇರಳ ಮೂಲದ ಯುವಕನಿಂದ ಸುಮಾರು 1 ಕೋಟಿ ರೂ ಮೌಲ್ಯದ ಮಾದಕ ದೃವ್ಯ ವಷಪಡಿಸಿಕೊಂಡು ಕೇರಳ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯವು 7 ದಿನಗಳ ಪೋಲಿಸ್ ಕಸ್ಟಡಿ ಜಾರಿಗೊಳಿಸಿದೆ.

ಗೋವಾದ ಶಿವೋಲಿಯಲ್ಲಿ ಹೊರ ರಾಜ್ಯದ ಯುವಕನೋರ್ವ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟಿರುವ ಬಗ್ಗೆ  ANC  ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಈ ಅಧೀಕೃತ ಮಾಹಿತಿಯ ಹಿನ್ನೆಲೆಯಲ್ಲಿ ಪೋಲಿಸ್ ಅಧೀಕ್ಷಕ ಟಿಕಂ ಸಿಂಗ್ ವರ್ಮಾ ರವರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ನೆರ್ಲಾನ್ ಅಲ್ಬುಕರ್ಕ ರವರ ನೇತ್ರತ್ವದಲ್ಲಿ ಸಬ್ ಇನ್ಸ ಪೆಕ್ಟರ್ ಸುನೀಲ್ ಪಾಲ್ಕರ್, ಹವಾಲ್ದಾರ ಉಮೇಶ್ ದೇಸಾಯಿ ರವರನ್ನೊಳಗೊಂಡ ತಂಡ ಮಧ್ಯ ರಾತ್ರಿಯ ವೇಳೆಗೆ ಈ ಮನೆಯ ಮೇಲೆ ಧಾಳಿ ನಡೆಸಿದೆ. ಮನೆಯಲ್ಲಿ ಹುಡುಕಾಟ ನಡೆಸಿದಾಗ 26.39 ಗ್ರಾಂ ನ 1,825 ಎಲ್‍ಎಸ್‍ಡಿ ಬ್ಲಾಟ್ ಪೇಪರ್‍ಗಳು, 1.07 ಗ್ರಾಂ ನ 43 ಎಲ್‍ಎಸ್‍ಡಿ ಪೀಸ್, 102 ಗ್ರಾಂ ಉತ್ತಮ ಗುಣಮಟ್ಟದ ಗಾಂಜಾ ಮತ್ತು 78.80 ಗ್ರಾಂ ಸೈಲೋಸಿಬಿನ್ ಮ್ಯಾಜಿಕ್ ಮಶ್ರೂಮ್ ಸೇರಿ ಸುಮಾರು 1 ಕೋಟಿ 1 ಲಕ್ಷದ 65 ಸಾವಿರದ 200 ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೋಲಿಸರು ವಷಪಡಿಸಿಕೊಂಡಿದ್ದಾರೆ.

ಶಂಕಿತನ ವಿರುದ್ಧ ಕಲಂ 20(ಬಿ) (2) (ಎ) ಮತ್ತು 22(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು 7 ದಿನಗಳ ಪೋಲಿಸ್ ಕಸ್ಟಡಿ ಜಾರಿಗೊಳಿಸಿದೆ. ಪೋಲಿಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.