Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಏಕಲ ಅಭಿಯಾನ ಬೆಳಗಾವಿ ಹಾಗೂ ರೋಟರಿ ಕ್ಲಬ್ ಬೆಳಗಾವಿ ಇವರ ವತಿಯಿಂದ ಜೋಯಿಡಾ ಮತ್ತು ರಾಮನಗರದ ಸುತ್ತಮುತ್ತಲಿನ ಒಂದು ಸಾವಿರ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು.

Banner Ad

ಈ ಕಿಟ್ ನಲ್ಲಿ ಮಕ್ಕಳಿಗೆ ಬಟ್ಟೆಗಳು, ಜಮಖಾನೆ, ಸೊಳ್ಳೆ ಪರದೆ, ಕಂಪಾಸ್ ಬಾಕ್ಸ್, ಚಪ್ಪಲಿ, ರೈನಕೋಟ್, ಸ್ವೇಟರ್, ಮುಂತಾದ ಶಾಲಾ ಮಕ್ಕಳಿಗೆ ಉಪಯೋಗವಾಗುವ ಸುಮಾರು 15 ರಿಂದ 18 ವಸ್ತುಗಳು ಒಳಗೊಂಡಿವೆ, ಈ ಕಾರ್ಯಕ್ರಮಕ್ಕೆ ದಾಂಡೇಲಿಯ ಏಕಲ ಅಭಿಯಾನದ ಅಧ್ಯಕ್ಷರಾದ ಮುರಳಿಧರ ಗೋಸಿ ಹಾಗೂ ಸದಸ್ಯರಾದ ದೀಪಕ ಸಾಮಂತ, ಪ್ರಕಾಶ ಬೇಟಕರ್ ಹಾಗೂ ಹಾಗೂ ಏಕಲ ಅಭಿಯಾನ ಬೆಳಗಾವಿ ಸಮಿತಿಯವರು ಹಾಗೂ ರೋಟರಿ ಕ್ಲಬ್ ಬೆಳಗಾವಿ ಸಮಿತಿಯವರು ಏಕಲ ಅಭಿಯಾನದ ಕಾರ್ಯಕರ್ತರು ಹಾಗೂ ಆಚಾರ್ಯರು ಶ್ರಮಿಸಿದರು.ಸ್ಥಳೀಯ ಶಾಲಾ ಶಿಕ್ಷಕರು ಸಹಕರಿಸಿದರು

Banner Ad