ಸುದ್ದಿ ಕನ್ನಡ ವಾರ್ತೆ
ಶಿರಸಿ: ಬೆಂಗಳೂರಿನ ಸಿರಿಕಲಾ ಮೇಳದಿಂದ ನೀಡಲಾಗುವ ವಾರ್ಷಿಕ ಸಿರಿಕಲಾ ಪುರಸ್ಕಾರವನ್ನು ಈ ಬಾರಿ ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ.ಹೆಗಡೆ ಗೋಳಗೋಡ ಅವರಿಗೆ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮೇಳದ ಪ್ರಮುಖ ಸುರೇಶ ಹೆಗಡೆ ಕಡತೋಕ ತಿಳಿಸಿದ್ದಾರೆ.
ಸಾವಿರಾರು ಯಕ್ಷಗಾನ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಹಂಗಾರಕಟ್ಟೆಯ ಗುರು ಕೆ.ಪಿ.ಹೆಗಡೆ ಅವರು ಮೂಲತಃ ಸಿದ್ದಾಪುರ ತಾಲೂಕಿನ ಗೋಳಗೋಡಿನವರು. ಬೆಂಗಳೂರಿನ ಉ.ಕ.ಜಿಲ್ಲಾ ಸಭಾಂಗಣದಲ್ಲಿ ಅ.೨೦ರಂದು ನಡೆಯುವ ಸಿರಿಕಲಾ ಯಕ್ಷತ್ರಿವಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ಮೇಳದ ಇನ್ನೋರ್ವ ಪ್ರಮುಖ ಟಿ.ಎಸ್. ಮಹಾಬಲೇಶ್ವರ ತಿಳಿಸಿದ್ದಾರೆ.