ಸುದ್ಧಿಕನ್ನಡ ವಾರ್ತೆ
Goa: ತನ್ನ ನಾಲ್ಕು ವರ್ಷದ ಮಗನನ್ನು ಕೊಲೆಗೈದ ಎಐ ಸ್ಟಾರ್ಟಪ್ ಕಂಪನಿಯ ಸಿಇಒ ಸೂಚನಾ ಸೇಟ್ ಳನ್ನು ಗೋವಾ ಪೋಲಿಸರು ಕಳೆದ ಕೆಲ ತಿಂಗಳ ಹಿಂದೆ ಬಂಧಿಸಿದ್ದರು. ಪತಿ-ಪತ್ನಿಯ ಜಗಳದಿಂದಾಗಿ ಸೂಚನಾ ಇವಳು ಬೆಂಗಳೂರಿನಿಂದ ಗೋವಾಕ್ಕೆ ಬಂದು ತನ್ನ ಮಗನನ್ನೇ ಕೊಲೆಗೈದಿದ್ದಳು ಎಂಬುದು ಕೂಡ ಬೆಳಕಿಗೆ ಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ತಿಂಗಳಿಂದ ಗೋವಾದ ಕೋಲ್ವಾಳ ಕಾರಾಗೃಹದಲ್ಲಿರುವ ಸೂಚನಾ ಸೇಟ್ ಇವಳು ಮತ್ತೆ ಇದೀಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾಳೆ.
ಈ ಹಿಂದೆ ಕೂಡ ಕೊಲೆ ಆರೋಪಿ ಸೂಚನಾ ಸೇಟ್ ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಳು. ಆದರೆ ಆ ಎಲ್ಲ ಅರ್ಜಿ ತಿರಸ್ಕøತಗೊಂಡಿತ್ತು. ಆರೋಪಪತ್ರ ಸಲ್ಲಿಕೆಯಾದ ನಂತರ ಆರೋಪಿ ಸೂಚನಾ ಸೇಟ್ ಇವಳು ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಳು. ಆದರೆ ಸರ್ಕಾರಿ ವಕೀಲರು ಪ್ರತಿಜ್ಞಾಪತ್ರ ಸಲ್ಲಿಸಲು ಇನ್ನೂ ಒಂದು ವಾರ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 22 ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಬೆಂಗಳೂರು ಮೂಲದ ಸೂಚನಾ ಸೇಟ್ ಇವಳು ಗೋವಾಕ್ಕೆ ತನ್ನ ಮಗನೊಂದಿಗೆ ಪ್ರವಾಕ್ಕೆಂದು ಬಂದು, ಗೋವಾದಲ್ಲಿ ಮಗನನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪವಿದೆ. ನಂತರ ಇವಳು ಬ್ಯಾಗ್ ನಲ್ಲಿ ಮಗನ ಮೃತದೇಹವನ್ನು ತುಂಬಿಕೊಂಡು ಜನವರಿ 6 ರಂದು ಬೆಂಗಳೂರಿಗೆ ಬಾಡಿಗೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಕರ್ನಾಟಕದ ಚಿತ್ರದುರ್ಗದಲ್ಲಿ ಸೂಚಣಾ ಸೇಟ್ ಳನ್ನು ಬಂಧಿಸಲಲಾಗಿತ್ತು.