ಸುದ್ದಿ ಕನ್ನಡ ವಾರ್ತೆ
ಶಿರಸಿ: ಬಾವಿಗೆ ಬಿದ್ದ ಚಿರತೆಯನ್ನು ಗ್ರಾಮಸ್ಥರೇ ಮೇಲಕ್ಕೆ ಎತ್ತಿದ ಅಪರೂಪದ ಘಟನೆ ಶಿರಸಿಯ ಜಾನ್ಮನೆ ಯಲ್ಲಿ ನಡೆದಿದೆ.

ಬಾವಿಗೆ ಬಿದ್ದ ಚಿರತೆಗೆ ಅರವಳಿಕೆ ಮದ್ದನ್ನು ನೀಡದೆಯೇ ಯಾವುದೇ ಪೆಟ್ಟು ಮಾಡದೆಯೇ ಸುರಕ್ಷಿತವಾಗಿ ಗ್ರಾಮಸ್ಥರು ಧೈರ್ಯದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಹಗ್ಗಕ್ಕೆ ಒಂದು ಮರದ ಟೊಂಗೆಯನ್ನು ಕಟ್ಟಿ ಅದರ ಸಹಾಯದಿಂದ ಗ್ರಾಮಸ್ಥರು ಧೈರ್ಯವಾಗಿ ಚಿರತೆಯನ್ನು ಮೇಲಕ್ಕೆ ಎತ್ತಿದ್ದಾರೆ.

ಚಿರತೆ ಮೇಲಕ್ಕೆ ಬರುತ್ತಿದ್ದಂತೆಯೇ ಗ್ರಾಮಸ್ಥರೆಲ್ಲರೂ ಒಮ್ಮೆಲೇ ಬೊಬ್ಬೆ ಹೊಡೆದಿದ್ದರಿಂದ ಚಿರತೆ ಸಹಜವಾಗಿಯೇ ಕಾಡಿನತ್ತ ಓಡಿಹೋಗಿದೆ.

ಗ್ರಾಮಸ್ಥರ ಈ ಕಾರ್ಯಾಚರಣೆಗೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.