ಸುದ್ಧಿಕನ್ನಡ ವಾರ್ತೆ
Goa: ಪ್ರಸಕ್ತ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಗೋವಾ ರಾಜ್ಯದ ಜನರಿಗೆ ದೊಡ್ಡ ಉಡುಗೊರೆ ಲಭಿಸಲಿದೆ. ಗೋವಾ ರಾಜ್ಯದ ಇಂಧನ ಸಚಿವ ಸುದೀನ ಧವಳೀಕರ್ ರವರು ಈ ದೊಡ್ಡ ಘೋಷಣೆ ಮಾಡಿದ್ದಾರೆ. ಪ್ರತಿ ತಿಂಗಳು 300 ರಿಂದ 400 ಯೂನಿಟ್ ವಿದ್ಯುತ್ ಬಳಕೆ ದಾರರಿಗೆ ಗೋವಾ ಸರ್ಕಾರ ಉಚಿತ ವಿದ್ಯುತ್ ಪೂರೈಕೆ ಮಾಡಲಿದೆ.

ಗೋವಾ ರಾಜ್ಯ ಇಂಧನ ಸಚಿವ ಸುದೀನ ಧವಳೀಕರ್ ಧರ್ಮಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಉಪಸ್ಥಿತರಿದ್ದ ಸಂರ್ಭದಲ್ಲಿ ಈ ವಿಶೇಷ ಉಡುಗೊರೆಯ ಘೋಷಣೆ ಮಾಡಿದ್ದಾರೆ. ತಮ್ಮ ತಮ್ಮ ಊರಿನಲ್ಲಿ ಸೋಲಾರ್ ಪ್ಲ್ಯಾಂಟ್ ನಿರ್ಮಾಣ ಮಾಡಲು ಪಾಳು ಬಿದ್ದ ಭೂಮಿಯ ಮಾಹಿತಿ ನೀಡಲು ಗೋವಾ ರಾಜ್ಯದ ಜನರು ಹಾಗೂ ಸ್ಥಳೀಯ ಶಾಸಕರು ಮುಂದೆ ಬರಬೇಕು ಎಂದು ಸಚಿವ ಸುದೀನ ಧವಳೀಕರ್ ಮನವಿ ಮಾಡಿದ್ದಾರೆ.

ಗೋವಾ ರಾಜ್ಯದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರದ ಸಹಕಾರ ಲಭಿಸಿದೆ. ಈ ಸಹಕಾರದಿಂದಾಗಿ ವಿದ್ಯುತ್ ಕ್ಷೇತ್ರದಲ್ಲಿಯೂ ಕೂಡ ಗೋವಾ ರಾಜ್ಯ ಸ್ವಾವಲಂಭಿಯಾಗುವ ಸಂಕಲ್ಪವಿದೆ. 2027 ರವರೆಗೆ ಗೋವಾ ರಾಜ್ಯದಲ್ಲಿ 150 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಗೋವಾ ರಾಜ್ಯದಲ್ಲಿಯೇ ಮಾಡಲಾಗುವುದು ಎಂದು ಸಚಿವ ಸುದೀನ ಧವಳೀಕರ್ ವಿಶ್ವಾಸ ವ್ಯಕ್ತಪಡಿಸಿದರು.

                          ಕರ್ನಾಟಕದಂತೆಯೇ ಗೋವಾದಲ್ಲಿಯೂ ಉಚಿತ ವಿದ್ಯುತ್..?
ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಉಚಿತ ವಿದ್ಯುತ್ ಘೋಷಣೆ ಮಾಡಿದ್ದು, ಕಡಿಮೆ ಗೃಹ ಬಳಕೆಯ ಕುಟುಂಬಗಳಿಗೆ ಉಚಿತ ವಿದ್ಯುತ್ ಲಭಿಸುತ್ತಿದೆ. ಇದೀಗ ಗೋವಾ ರಾಜ್ಯ ಸರ್ಕಾರವೂ ಕೂಡ ಗೋವಾದಲ್ಲಿ ಕಡಿಮೆ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡಲು ಮುಂದಾಗಿದೆ.