ಸುದ್ದಿ ಕನ್ನಡ ವಾರ್ತೆ

ನನ್ನ ಪಕ್ಷನಿಷ್ಠೆ, ಕರ್ತವ್ಯ ಶ್ರದ್ಧೆ ಮತ್ತು ಸಂಘಟನಾ ಶಕ್ತಿ, ರೈತಪರ ಕಾಳಜಿಯನ್ನು ಗುರುತಿಸಿ, ನನ್ನನ್ನು ಬಿಜೆಪಿಯ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷನನ್ನಾಗಿ ನೇಮಿಸಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್ ಎಸ್ ಹೆಗಡೆಯವರು ಆದೇಶ ಹೊರಡಿಸಿದ್ದಾರೆ. ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳು.

ಇದಕ್ಕಾಗಿ,ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸದಾ ನನ್ನನ್ನು ಹುರಿದುಂಬಿಸಿ ಬೆಂಬಲಿಸುತ್ತಿರುವ ಗೌರವಾನ್ವಿತ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ, ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ ಅವರಿಗೆ, ರಾಜ್ಯ ರೈತಮೋರ್ಚಾ ಅಧ್ಯಕ್ಷರಾದ ಶ್ರೀ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ.ರಾಜೀವ, ಮಾಜಿ ಸಚಿವರುಗಳಾದ ಶ್ರೀ ಸುನೀಲ್ ಕುಮಾರ ಕಾರ್ಕಳ, ಶ್ರೀ ಹರತಾಳು ಹಾಲಪ್ಪ, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್ ನಾಯ್ಕ. ಕುಮಟಾ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ, ಮಾಜಿ ಶಾಸಕರುಗಳಾದ ಶ್ರೀ ಸುನೀಲ ನಾಯ್ಕ, ಸುನಿಲ್ ಹೆಗಡೆಯವರು, ರಾಜ್ಯ ಕಾರ್ಯಕಾರಿಣಿ ಸದಸ್ಯರಾಜ ಕೆ.ಜಿ.ನಾಯ್ಕ ಮತ್ತು ಪಕ್ಷದ ಜಿಲ್ಲೆಯ ಎಲ್ಲ ಪ್ರಧಾನ ಕಾರ್ಯದರ್ಶಿಗಳು,ನಿಕಟಪೂರ್ವ ಅಧ್ಯಕ್ಷರಾದ ರಮೇಶ ನಾಯ್ಕ ಕುಪ್ಪಳ್ಳಿ, ಜಿಲ್ಲಾ ಕೋರ್ ಕಮಿಟಿ ಸದಸ್ಯರು, ಎಲ್ಲಾ ಮಂಡಳಾಧ್ಯಕ್ಷರು, ಸಮಸ್ತ ಕಾರ್ಯಕರ್ತರು,ಹಿತೈಷಿಗಳು, ಆತ್ಮೀಯರಿಗೆ ಧನ್ಯವಾದಗಳು.

ನಿರಂತರ ಹೋರಾಟದಿಂದ ಗುರುತಿಸಿಕೊಂಡ ನಾನು ಪಕ್ಷ ನೀಡಿದ ಹುದ್ದೆಗೆ ನ್ಯಾಯ ಒದಗಿಸುವುದರ ಜೊತೆಗೆ ಜಿಲ್ಲೆಯ ರೈತಪರ,ಪಕ್ಷದ ಕಾರ್ಯಕರ್ತರ ಪರ, ನೊಂದವರ ಪರ, ನ್ಯಾಯದ ಪರ ಧ್ವನಿಯಾಗಿ ಕೆಲಸ ಮಾಡುತ್ತೇನೆಂದು ಆಶ್ವಾಸನೆ ನೀಡುತ್ತೇನೆ.

ಧನ್ಯವಾದಗಳು
ಅನಂತಮೂರ್ತಿ ಹೆಗಡೆ.