ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕುಂಬಾರವಾಡಾ ಗ್ರಾಮ ಪಂಚಾಯತ ವ್ಯಾಪ್ತಿಯ ತೇರಾಳಿ ಗ್ರಾಮದ ಶ್ರೀ ಮಹಾಲಸಾ ದೇವಿಯ ವಾರ್ಷಿಕೋತ್ಸವ ದಿನಾಂಕ:25/02/2026 ರ ಬುಧವಾರ ನಡೆಯಲಿದೆ. ಕಾರ್ಯಕ್ರಮದ ನಿಮಿತ್ಯ ಮಧ್ಯಾಹ್ನ 12-30 ಗಂಟೆಗೆ ಶ್ರೀ ಮಹಾಲಸಾ ದೇವಿಯ ಮಹಾಪೂಜಾ,ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಭಕ್ತ ವೃಂದದವರು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಸಾಯಂಕಾಲ 5:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 5:00 ಗಂಟೆಗೆ ಶ್ರೀ ಗಜಾನನ ನಾರ್ವೇಕರ ಮಹಾರಾಜ ಹಾಗೂ ಸಂತ ಮಂಡಳಿಯವರಿಂದ ಹರಿಪಾಠ ಕಾರ್ಯಕ್ರಮ ನಡೆಯಲಿದೆ. ರಾತ್ರಿಯ 09 ಗಂಟೆಯ ವೇಳೆ ಶ್ರೀ ದೇವಿಯ ಫಲಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ.ರಾತ್ರಿ 12:00 ಗಂಟೆಗೆ ಭಕ್ತ ಜನರ ವಿಶೇಷ ಮನರಂಜನೆಗಾಗಿ ಶ್ರೀ ಮಹಾಲಸಾ ನಾಟ್ಯ ಮಂಡಳ ತೇರಾಳಿಯ ಕಲಾವಿದರಿಂದ ಶ್ರೀ ಕಮಲಾಕರ ಬೋರಕರ ವಿರಚಿತ “ತಡಿಪಾರ” ಎಂಬ ಸುಂದರ ಕಾಲ್ಪನಿಕ ಸಾಮಾಜಿಕ, ನಾಟಕದ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಹಾಲಸಾ ದೇವಿಯ ಕಮಿಟಿ ಹಾಗೂ ಊರ ನಾಗರಿಕರು ತೇರಾಳಿ,ಬಾಮಣೆ,ಶಿರೋಳಿ ವಿನಂತಿಸಿಕೊಂಡಿದ್ದಾರೆ.