Banner Ad

ಸುದ್ದಿ ಕನ್ನಡ ವಾರ್ತೆ

. ಗೋಕರ್ಣ:ಮಹಾಶಿವರಾತ್ರಿಯ ನಿಮಿತ್ತ ಬುಧವಾರ ಮಹಾರಥೋತ್ಸವವು ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ಅಲ್ಲಿ ನೆರೆದಿದ್ದ ಭಕ್ತರು ಹರಹರ ಮಹಾದೇವ ಎಂದು ಘೋಷಣೆಯನ್ನು ಕೂಗುತ್ತಾ ಬಾಳೆಹಣ್ಣು, ಕಡಲೆಯನ್ನು ತೇರಿಗೆ ಎಸೆದರು.

Banner Ad

ಶಿವರಾತ್ರಿಯ ಅಂಗವಾಗಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಜನರು ತುಂಬಿ ತುಳುಕುತ್ತಿದ್ದರು. ಶಿವರಾತ್ರಿಯ ದಿನ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮಹಾರಥೋತ್ಸವ ಇದ್ದುದರಿಂದ ಆ ಭಾಗದ ಜನರು ಗೋಕರ್ಣಕ್ಕೆ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರು.

Banner Ad