ಸುದ್ಧಿಕನ್ನಡ ವಾರ್ತೆ
Goa: ನೊವೆಂಬರ್ 20 ರಿಂದ ಗೋವಾದಲ್ಲಿ ನಡೆಯಲಿರುವ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFI) ಪ್ರತಿನಿಧಿಗಳ ಆನ್ ಲೈನ್ ನೋಂದಣಿ ಆರಂಭಗೊಂಡಿದೆ. ನೋಂದಣಿ ಆರಂಭಗೊಂಡ 9 ದಿನಗಳಲ್ಲಿ ದೇಶ-ವಿದೇಶಿಯ 14,00 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಚಲನಚಿತ್ರೋತ್ಸವದಲ್ಲಿ ಗೋವಾ ವಿಭಾಗಕ್ಕಾಗಿ ಗೋವಾ ಮನೋರಂಜನಾ ಸಂಸ್ಥೆ ಚಲನಚಿತ್ರ ಪ್ರವೇಶಕ್ಕೆ ಆಮಂತ್ರಿಸಿದೆ.

ಗೋವಾದಲ್ಲಿ ಪ್ರತಿ ವರ್ಷದಂತೆಯೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು (IFFI) ನವೆಂಬರ್ 20 ರಿಂದ 28 ರವರೆಗೆ ನಡೆಯಲಿದೆ. ವಿಶೆಷವಾಗಿ ಗೋವಾ ವಿಭಾಗದ ಕೊಂಕಣಿ ಹಾಗೂ ಮರಾಠಿ ಫಿಚ್ಚರ್ ಮತ್ತು ನಾನ್ ಫಿಚ್ಚರ್ ಫಿಲ್ಮ ಪ್ರವೇಶಕ್ಕೆ ಆಮಂತ್ರಿಸಲಾಗಿದೆ. ಈ ಕುರಿತು ಅಗತ್ಯ ಪ್ರವೇಶವನ್ನು ಅಕ್ಟೋಬರ್ 30 ರ ಒಳಗೆ ಸಲ್ಲಿಸುವುದು ಖಡ್ಡಾಯವಾಗಿದೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪ್ರತಿನಿಧಿಗಳ ನೋಂದಣಿಗೆ 1,000 ರೂ ಶುಲ್ಕ ವಿಧಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಪಾಸ್ ಲಭಿಸಲಿದೆ. ಫಿಲ್ಮಂ ಬಜಾರಕ್ಕೆ 18 ಆವೃತ್ತಿ ನೋಂದಣಿಯಾಗಿದೆ.

ಗೋವಾದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFI) ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ಜಗತ್ತಿನ 70 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಈ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ದೇಶಗಳ ಆಯ್ದ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.