Banner Ad

ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ:ಮಹಾಶಿವರಾತ್ರಿಯ ಪುಣ್ಯ ಸಂದರ್ಭದಲ್ಲಿ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಶ್ರೀಗಳು ಬೇಡ್ತಿ-ಅಘನಾಶಿನಿ ಉಳಿವಿಗಾಗಿ ಪ್ರತಿ ಮನೆಯಿಂದ ನದಿತಿರುವು ಯೋಜನೆ ವಿರೋಧಿಸಿ ಪೋಸ್ಟ್‌ಕಾರ್ಡ್ ಮೂಲಕ ಬರೆದು ಪ್ರಧಾನಮಂತ್ರಿಗೆ ಕಳುಹಿಸುವ “ಪೋಸ್ಟ್‌ಕಾರ್ಡ್ ಅಭಿಯಾನಕ್ಕೆ” ಚಾಲನೆ ನೀಡಿದರು. ಈ ಮೂಲಕ ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಎಲ್ಲರೂ ಸೇರಿ ಒತ್ತಾಯಿಸಬೇಕು ಎಂದು ತಿಳಿಸಿದರು.

Banner Ad

ನಂತರ ಶ್ರೀಮಠದ ಭಕ್ತವೃಂದ ಹಾಗೂ ಮಾತೆಯರಿಂದ ಅಘನಾಶಿನಿ ಆರತಿ ನೆರವೇರಿತು. ಸಂಜೆಯಿಂದ ಮಹಾಶಿವರಾತ್ರಿ ನಿಮಿತ್ತ ಶ್ರೀಮಠದಲ್ಲಿ ಶ್ರೀ ಶ್ರೀಗಳವರಿಂದ ಯಾಮಪೂಜೆ ನಡೆಯಿತು.ಭಕ್ತರಿಂದ ರುದ್ರಾನುಷ್ಠಾನವೂ ಸೋಮವಾರ ಬೆಳಗಿನವರೆಗೆ ಭಕ್ತಿಭಾವದಿಂದ ನೆರವೇರಿತು.

Banner Ad