ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದ ಖಾಂಡೊಳಾದ ಶ್ರೀ ವ್ಯಾಘ್ರೇಶ್ವರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಉತ್ತರಕನ್ನಡ ಜಿಲ್ಲೆಯ ವಿಶ್ವನಾಥ ಭಟ್ ರವರು ವೈದಿಕ ಜ್ಯೋತಿಷ್ಯ ಶಾಸ್ತ್ರಕ್ಕಾಗಿ ಸಮರ್ಪಿತವಾದ ಹೊಸ ಮೊಬೈಲ್ ಯಾಪ್ ಸಿದ್ಧಪಡಿಸಿದ್ದಾರೆ. ಇದು ಫೆಬ್ರುವರಿ 15 ರಂದು ಮಹಾಶಿವರಾತ್ರಿಯಂದು ಸಂಜೆ 4 ಗಂಟೆಗೆ ವ್ಯಾಘ್ರೇಶ್ವರ ದೇವಸ್ಥಾನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ನಂತರ ಈ ಯಾಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ವಿಶ್ವನಾಥ ಭಟ್ ಮಾಹಿತಿ ನೀಡಿದ್ದಾರೆ.

ಈ ಹೊಸ ಯಾಪ್ ಜ್ಯೋತಿಷಿಗಳಿಗೆ ಹಾಗೂ ಪೂಜಾರಿಗಳಿಗೆ ಸವಿಸ್ತಾರವಾದ ಜಾತಕ ,ಪಂಚಾಂಗ ಮಾಹಿತಿಗಾಗಿ ಈ ಹೊಸ ಯಾಪ್ ಹೆಚ್ಚು ಅನುಕೂಲವಾಗಲಿದೆ.

ಪಾರಂಪರಿಕ ವೈದಿಕ ಜ್ಯೋತಿಷ್ಯ ಗಣೀತ ಸುಲಭ ಹಾಗೂ ಆಧುನಿಕ ಪದ್ಧತಿಯಲ್ಲಿ ಪಡೆಯಲು ಈ ಯಾಪ್ ರಚಿಸಲಾಗಿದೆ. ಪ್ರಾಚೀನ ಜ್ಯೋತಿಷ್ಯ ಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನದ ಸಂಗಮದಲ್ಲಿ ಈ ಯಾಪ್ ಮೂಲಕ ಅಗತ್ಯ ಎಲ್ಲ ಮಾಹಿತಿ ಲಭಿಸಲಿದೆ. ಈ ಯಾಪ್ ನ ಮೂಲಕವಾಗಿ ಜಟಿಲವಾದ ಜ್ಯೋತಿಷ್ಯ ವಿಶ್ಲೇಷಣೆ ಮಾಡಲು ಕೂಡ ಸುಲಭವಾಗಲಿದೆ ಎಂದು ವಿಶ್ವನಾಥ ಭಟ್ ಮಾಹಿತಿ ನೀಡಿದರು.
ಈ ಯಾಪ್ ಸಿದ್ಧಪಡಿಸಲು ಹಲವು ವರ್ಷಗಳ ಪರಿಶ್ರಮ, ಸಾಪ್ಟವೇರ್ ಅಭಿವೃದ್ಧಿ ಹಾಗೂ ವೈದಿಕ ಜ್ಯೋತಿಷ್ಯ ಗಣೀತ ಕ್ಷೇತ್ರದ ಅನುಭವದ ಮೂಲಕ ಸಾಧ್ಯವಾಗಿದೆ. ಪಾರಂಪರಿಕ ಪದ್ಧತಿ ಹಾಗೂ ಆಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಜೋಡಿಸುವ ವೇದಿಕೆ ಸಿದ್ಧಪಡಿಸಲು ಸಾಧ್ಯವಾಗಿದೆ.