ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ಉತ್ತರಕನ್ನಡ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯ ಪಕ್ರೃತಿ ಇಕೋ-ಕ್ಲಬ್ ವತಿಯಿಂದ ಶಾಲೆಯ ಮಕ್ಕಳಿಗೆ ಬೆಂಕಿ ರಹಿತ ಆಹಾರ ತಯಾರಿಕೆಯ ಸ್ಪರ್ಧಾ ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ ಸ್ಪರ್ಧಾ ಕಾರ್ಯಕ್ರಮದ ಉದ್ದೇಶ, ಮಹತ್ವ,ಲಾಭ,ನಿಯಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಬೆಂಕಿ ರಹಿತ ಆಹಾರ ತಯಾರಿಕೆಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಸ್ವೀಟ್ ಡೆಜರ್ಟ,ಐಸ್ ಕ್ರೀಂ ಡೊನಟ್, ಲಿಂಬು ಶರಬತ್,ಕೋಕಂ,ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಲಸ್ಸಿ, ಬೆಣ್ಣೆ,ಕುರುಕುರೆ ಗಿರಮಿಟ್, ಕ್ರಸ್ಟರ್ಡ,ಸ್ಯಾಂಡ್ ವಿಚ್,ಪ್ರುಟ್ಸ್ ಕ್ರಸ್ಟರ್ಡ,ಕ್ರೀಮ್ ಕೇಕ್,ಬ್ರೇಡ್ ಕೇಕ್,ಮಂಡಕ್ಕಿ ಕಾರಾ ಗಿರಮಿಟ್,ಸ್ವೀಟ್ ಡೆಜರ್ಟ, ಚಾಕಲೇಟ್ ಕೇಕ್,ಬೇಲ್ ಪೂರಿ ಸೇರಿದಂತೆ ಇನ್ನಿತರ ಆಹಾರ ಉತ್ಪನ್ನಗಳನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ತಯಾರಿಸಿ ಆಸಕ್ತಿಯಿಂದ ಭಾಗವಹಿಸಿದ್ದರು. ಶಾಲೆಯ ಸಹ ಶಿಕ್ಷಕರು,ಹಳೆಯ ವಿದ್ಯಾರ್ಥಿಗಳು,ಪಾಲಕರು ಆಹಾರ ಉತ್ಪನ್ನಗಳ ತಯಾರಿಕೆಯ ಮಾರ್ಗದರ್ಶನ ಮಾಡಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ, ಸಹ ಶಿಕ್ಷಕರಾದ ಬಿ.ಚವ್ಹಾಣ,ಸಹ ಶಿಕ್ಷಕಿಯರಾದ ಪಿಲೋಮೀನ ನರೋನ,ವಂದನಾ ದೇಶಪಾಂಡೆ, ಸುಮನಾ,ಅಡುಗೆ ತಯಾರಕರು ಆಹಾರ ಉತ್ಪನ್ನಗಳ ತಯಾರಿಕೆಯ ರುಚಿಯನ್ನು ನೋಡಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನ ವಿಜೇತ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ವಿತರಿಸಲಾಯಿತು.
