ಸುದ್ಧಿಕನ್ನಡ ವಾರ್ತೆ
Goa: ಗೋವಾದ ಮಡಗಾಂವ ಬೇತಲಬಾಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬೃಹತ್ ಯೋಜನೆಗಳಿಗೆ ತೋವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯ ಮೇರೆಗೆ ವಿಶೇಷ ಗ್ರಾಮಸಭೆ ಆಯೋಜಿಸಲಾಗಿತ್ತು ಹೊರ ರಾಜ್ಯದ ಜನರು ಗ್ರಾಮಕ್ಕೆ ಬಂದು ಭೂಮಿ ಖರೀದಿಸಿ ಕಟ್ಟಡ ನಿರ್ಮಾಣ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಿರುವುದು ತಪ್ಪು. ಇನ್ನು ಇಲ್ಲಿ ಯಾವುದೇ ಯೋಜನೆಯನ್ನು ಮಾಡಲು ಬಿಡುವುದಿಲ್ಲ ಎಂದು ಆಕ್ರೋಷ ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.
ಗೋವಾ ರಾಜ್ಯದಲ್ಲಿ ಭೂಮಿ ರಕ್ಷಣೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಕೃಷಿ ಭೂಮಿಯನ್ನು ಭೂ ಪರಿವರ್ತನೆಗೆ ಪರಾನಗಿ ನೀಡುತ್ತಿರುವುದರಿಂದ ಜಮೀನು ಮಾರಾಟ ಹೆಚ್ಚುತ್ತಿದೆ. ಇದರಿಂದಾಗಿ ಮೆಘಾ ಪ್ರೊಜೆಕ್ಟಗಳು ಹೆಚ್ಚುತ್ತಿದ್ದು ಸ್ಥಳೀಯರು ಜೀವನ ನಡೆಸುವುದೇ ದುಸ್ಥರವಾಗುತ್ತಿದೆ. ಗ್ರಾಮದ ಯಾವುದೇ ಯೋಜನೆಗೆ ಬೆಂಬಲ ನೀಡುವುದಿಲ್ಲ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಮಿಕಿ ಪಾಶೆಕೊ ಮಾತನಾಡಿ-ಬೃಹತ್ ಯೋಜನೆಗಳಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ ಪಂಚಾಯತಿಗಳು ಯಾವುದೇ ಆಕ್ಷೇಪ ಸಲ್ಲಿಸುವುದಿಲ್ಲ. ಮೆಘಾ ಯೋಜನೆಯ ವಿರುದ್ಧ ಪಂಚಾಯತಿಯಿಂದ ದೂರು ಬಂದರೆ ಪರಿಗಣನೆಗೆ ತೆಗೆದುಕೊಳ್ಳಬೇಕು. ಮೆಘಾ ಯೋಜನೆಗೆ ಸಂಬಂಧಿಸಿದಂತೆ ಅನುಮೋದನೆಗಾಗಿ ಎಲ್ಲಾ ಕಡತಗಳನ್ನು ಅನುಮೋದನೆಗಾಗಿ ಗ್ರಾಮಸಭೆಯ ಮುಂದೆ ಇಡಬೇಕು ಎಂದು ಮಿಕಿ ಪಾಶೆಕೊ ನುಡಿದರು.
ಬೇತಲಬಾಟಿ ಪಂಚಾಯತಿಯ ಗ್ರಾಮಸಭೆ ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ, ಗ್ರಾನಸಭೆಯ ನಡಾವಳಿಗಳನ್ನು ನಿಗಧಿತ ಸಮಯಕ್ಕೆ ಕಳುಹಿಸುತ್ತಿಲ್ಲ ಎಂಬಿತ್ಯಾದಿ ದೂರುಗಳು ಬಂದಿದ್ದು ಈ ಕುರಿತು ಗಟ ವಿಕಾಸ ಅಧಿಕಾರಿ ಮಿಶ್ರಾ ರವರು ಪಂಚಾಯತಿ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿ ಕಳೆದ ಮೂರು ಗ್ರಾಮಸಭೆಗಳ ನಡಾವಳಿ ಸಿದ್ಧಪಡಿಸುವಂತೆ ತಿಳಿಸಿದರು.