ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ಯುವಕರ ಹಾಗೂ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ಬೊಂಡೇಲಿಯಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಮಣೆ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ,ಅಸುಳ್ಳಿ ತಂಡವು (ರನ್ನರ್ ಅಪ್) ದ್ವಿತೀಯ ಸ್ಥಾನ ಪಡೆಯಿತು.

ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗ್ರಾಮೀಣ ತಂಡಗಳು ಭಾಗವಹಿಸಿದ್ದವು. ಸಂಘಟಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು.ಅಂತಿಮ ದಿನದ ಪೈನಲ್ ಪಂದ್ಯದಲ್ಲಿ ಬಾಮಣೆ ಹಾಗೂ ಅಸುಳ್ಳಿ ತಂಡಗಳ ನಡುವಿನ ಪಂದ್ಯದಲ್ಲಿ ನಿಗದಿತ ಒವರ್ ನಲ್ಲಿ ಬಾಮಣೆ ತಂಡವು ಅಸುಳ್ಳಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಬಾಮಣೆ ತಂಡದಲ್ಲಿಯ ಸಂದೇಶ,ದುರ್ಗೆಶ,ರಘುನಾಥ, ಗಜಾನನ,ಸುರೇಂದ್ರ,ಸತೀಶ, ಪ್ರದೀಪ,ದಯಾನಂದ, ನಿಲೇಶ,ಪ್ರಕಾಶ,ಗುರುನಾಥ, ಪ್ರಸನ್ನ, ರಾಜೇಂದ್ರ, ಓಂಕಾರ, ಅಕ್ಷಯ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆದ ಬಾಮಣೆ ತಂಡದವರಿಗೆ ಊರಿನ ಗ್ರಾಮಸ್ಥರು, ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.