ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಡೇರಿಯೆ ಗ್ರಾಮದ ಶ್ರೀ ಸಿದ್ಧನಾಥ ದೇವರ ವಾರ್ಷಿಕೋತ್ಸವ ದಿನಾಂಕ:07/02/2026 ರ ಶನಿವಾರ ಯಶಸ್ವಿ ಸಂಪನ್ನಗೊಂಡಿತು.

ಪ್ರತಿ ವರ್ಷದಂತೆ ನಡೆಯುವ ಕಾರ್ಯಕ್ರಮದಂತೆ ಮಧ್ಯಾಹ್ನ 12:30 ಗಂಟೆಗೆ ಮಹಾಪೂಜೆ, ಮಹಾಭಿಷೇಕ ನಡೆಯಿತು, ಎಲ್ಲ ಭಕ್ತ ವೃಂದದವರು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿದರು. ಮಧ್ಯಾಹ್ನದಿಂದ ರಾತ್ರಿ 9 ಗಂಟೆಯವರೆಗೆ ಅನ್ನಸಂತರ್ಪಣೆ, ಸಂಜೆಯ ವೇಳೆ ಭಜನೆ,ಆರತಿ,ಶ್ರೀ ದೇವರ ಫಲಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಿತು.

ಊರಿನ ಪರ, ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶೃದ್ಧಾ ಭಕ್ತಿಯಿಂದ ಭಾಗವಹಿಸಿ ದೇವರ ದರ್ಶನ ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾದರು.