ಸುದ್ಧಿಕನ್ನಡ ವಾರ್ತೆ
ಪಣಜಿ: ಹುಬ್ಬಳ್ಳಿಯಲ್ಲಿ ಇತ್ತೋಚೆಗೆ ನಡೆದ ರಾಜ್ಯ ಮಟ್ಟದ ಜ್ಯೋತಿಷ್ಯ,ವಾಸ್ತು,ರತ್ನಶಾಸ್ತ್ರ, ಆಯುರ್ವೇದದ ಸಮ್ಮೇಳನದಲ್ಲಿ ಗೋವಾದ ಮಡಗಾಂವ ರತ್ನೋದ್ಯಮಿಗಳಾದ ಶಂಕರ ಭಟ್ ತೋಟಗೇರಿ ರವರನ್ನು ಜ್ಯೋತಿಷ್ಯ ರತ್ನ ಬಿರುದು ನೀಡಿ ಸನ್ಮಾನಿಸಲಾಯಿತು.

ಶಂಕರ ಭಟ್ ತೋಟಗೇರಿ ರವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆವಕಾರ್ ಊರಿನವರು. ಇವರು ಹಲವು ವರ್ಷಗಳ ಕಾಲ ಯಲ್ಲಾಪುರ ತಾಲೂಕಿನ ವಿವಿಧ ದಿನಪತ್ರಿಕೆಗಳಿಗೆ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಳೆದ ಸುಮಾರು 25 ವರ್ಷಗಳಿಂದ ಗೋವಾದಲ್ಲಿ ನೆಲೆಸಿ ಜ್ಯೋತಿಷ್ಯ, ವಾಸ್ತು ಶಾಸ್ತ್ರ, ರತ್ನ ಶಾಸ್ತ್ರದಲ್ಲಿ ಪಾರಂಗತರಾಗಿದ್ದು ಗೋವಾ ರಾಜಕೀಯ ನಾಯಕರು, ಉದ್ಯಮಿಗಳು, ಪ್ರತಿಷ್ಠಿತರಿಗೆ ಶಂಕರ ಭಟ್ ತೋಟಗೇರಿ ಧಾರ್ಮಿಕ,ಆಧ್ಯಾತ್ಮಿಕ, ಮಾರ್ಗದರ್ಶಕರಾಗಿದ್ದಾರೆ.
