ಸುದ್ಧಿಕನ್ನಡ ವಾರ್ತೆ
ಖ್ಯಾತ ಉದ್ಯಮಿ ರತನ್ ಟಾಟಾ ರವರು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಆದರೆ ಅವರ ಆದರ್ಶ ಜೀವನ ನಮ್ಮೆಲ್ಲರಿಗೂ ಮಾದರಿಯಾಗಿದೆ. ರತನ್ ಟಾಟಾ ರವರ ಶ್ವಾನ ನಮಗೆಲ್ಲ ಪರಿಚಿತ ಎಂಬಂತಿದೆ. ರತನ್ ಟಾಟಾ ರವರು ಕಳೆದ ಕೆಲ ದಿನಗಳ ಹಿಂದೆ “ಗೋವಾ” ಎಂಬ ತಮ್ಮ ಶ್ವಾನದೊಂದಿಗಿನ ಪೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಅವರು ತಮ್ಮ ಪ್ರೀತಿಯ ನಾಯಿಗೆ “ಗೋವಾ” ಎಂದು ನಾಮಕರಣ ಮಾಡಿದ್ದು ಅತ್ಯಂತ ವಿಶೇಷ.
ಗೋವಾ ಇದು ನನ್ನ ಆಫೀಸ್ ಪಾರ್ಟನರ್ ಎಂದು ಕೂಡ ಟಾಟಾ ಹೇಳಿಕೊಂಡಿದ್ದರು. ಈ ವಿಷಯ ಭಾರಿ ಚರ್ಚೆಗೂ ಕಾರಣವಾಗಿತ್ತು. ನಿಮ್ಮ ಪ್ರೀತಿಯ ನಾಯಿಗೆ ಗೋವಾ ಎಂದು ಏಕೆ ನಾಮಕರಣ ಮಾಡಿದ್ದೀರಿ….? ಎಂದು ಜನತ ಟಾಟಾ ರವರನ್ನು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ ಟಾಟಾ-ಈ ನಾಯಿ ಚಿಕ್ಕ ಮರಿಯಾಗಿದ್ದಾಗ ಗೋವಾದಿಂದ ನಮ್ಮೊಂದಿಗೆ ಬಂದಿತ್ತು. ಇದರಿಂದಾಗಿ ಇದಕ್ಕೆ ನಾನು ಪ್ರೀತಿಯಿಂದ ಗೋವಾ ಎಂದು ನಾಮಕರಣ ಮಾಡಿದ್ದೆ ಎಂದು ರತನ್ ಟಾಟಾ ಹೇಳಿಕೊಂಡಿದ್ದರು.

ರತನ್ ಟಾಟಾ ರವರು ಖ್ಯಾತ ಉದ್ಯಮಿ ಮಾತ್ರವಲ್ಲದೆಯೇ ಕೊಡುಗೈ ದಾನಿ ಕೂಡ ಆಗಿದ್ದರು. ಅವರು ತಮ್ಮ ಸಂಸ್ಥೆಯಲ್ಲಿ ಕಾರ್ಮಿಕರೊಂದಿಗೆ ತಾವೂ ಕೂಡ ಕಾರ್ಮಿಕರಾಗಿ ದುಡಿದಂತವರು. ಅವರು ದೇಶದಲ್ಲಿಯೇ ಪ್ರಪ್ರಥಮವಾಗಿ ಸಂಪೂರ್ಣ ಸ್ವದೇಶಿ ಕಾರು ಟಾಟಾ ಇಂಡಿಕಾ ಉತ್ಪಾದನೆ ಮಾಡಿದ ಕೀರ್ತಿ ಕೂಡ ರತನ್ ಟಾಟಾ ರವರಿಗೆ ಸಲ್ಲುತ್ತದೆ. ಮಧ್ಯಮ ಮತ್ತು ಬಡ ಕುಟುಂಬದವರಿಗೂ ಕಾರು ಖರೀದಿಸಲು ಸಾಧ್ಯವಾಗುವಂತಹ ಟಾಟಾ ನ್ಯಾನೊ ಉತ್ಪಾದನೆ ಆರಂಭಿಸಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ರತನ್ ಟಾಟಾ ಇಂದು ನಮ್ಮೊಂದಿಗೆ ಇಲ್ಲ, ಆದರೆ ಅವರು ಮಾಡಿದ ಉತ್ತಮ ಕಾರ್ಯಗಳು ಎಂದಿಗೂ ನಮ್ಮೊಂದಿಗೆ ಉಳಿದುಕೊಳ್ಳಲಿದೆ.