ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಾಸ್ತ್ರೀಯ ನೃತ್ಯ ಶಿಕ್ಷಣ ಹಾಗೂ ಕಲಾ ಪ್ರದರ್ಶನದಲ್ಲಿ ಕಳೆದ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಇಲ್ಲಿಯ ನಟರಾಜ ನೃತ್ಯ ಶಾಲೆಯ ಪಾಲಕ ವೃಂದ ಈ ವರ್ಷದಿಂದ ಭಾಗ್ವತ ಕಲಾ ಪ್ರಶಸ್ತಿ: ನೀಡಲು ನಿರ್ಧರಿಸಿದೆ.
ಪ್ರಥಮ ವರ್ಷದ ಭಾಗ್ವತ ಕಲಾ ಪ್ರಶಸ್ತಿ:ಗೆ ಮೈಸೂರಿನ ನೃತ್ಯ ಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರ ದ ನಿರ್ದೇಶಕಿ ಗುರು ವಿದುಷಿ ಕೃಪಾ ಫಡ್ಕೆ ಆಯ್ಕೆ ಆಗಿದ್ದಾರೆ..
ನಟರಾಜ ನೃತ್ಯ ಶಾಲೆಯ ಅಧ್ಯಕ್ಷರಾಗಿದ್ದ ಪ್ರದೀಪ ಭಾಗ್ವತ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಾರಂಭದಲ್ಲಿ ಎಲೆಕ್ಟ್ರಾನಿಕ್ ಇನ್ಸ್ಟಿಟ್ಯೂಟ್ ನ್ನು ಮುನ್ನಡೆಸಿದ ಅವರು, ನಂತರ ಕಲಾ ಕ್ಷೇತ್ರ ಆಯ್ದುಕೊಂಡರು,
ಅವರ ಅಂತರಂಗದಲ್ಲಿನ ಕಲಾ ತುಡಿತ ಹಾಗೂ ಮನೆಯ ಕಲಾರಾಧನೆಯ ವಾತಾವರಣ ಅವರನ್ನು ನಟರಾಜ ನೃತ್ಯ ಶಾಲೆಯ ಕಡೆಗೆ ಸೆಳೆದಿದ್ದರಿಂದ ತಾವು ಸ್ವತಹ ಕಲಾಕಾರರಾಗಿ ರೂಪುಗೊಂಡಿದ್ದ ಲ್ಲದೆ, ಕಳೆದ 30 ವರ್ಷಗಳಿಂದ ನಟರಾಜ ನೃತ್ಯ ಶಾಲೆಯ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತು ಕಲಾ ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡರು.
ಮೈಸೂರಿನಲ್ಲಿ ವಿ. ನಾಗಭೂಷಣ ಆಚಾರ್ಯ ಅವರಲ್ಲಿ ಮೃದಂಗ ವಾದನ ಅಭ್ಯಸಿಸಿದರು.. ನಂತರ ಮೋರ್ಚಿಂಗ್ ವಾದನ, ಖoಜರಾ ಹಾಗೂ ರಿದಂ ಪ್ಯಾಡ್ ನುಡಿಸುವುದನ್ನು ಸಹ ಕಲಿತರು. ನೃತ್ಯ ಶಾಲೆಯ ಮಕ್ಕಳಿಗೆ ತಾಳದl ಪಾಠ ಮಾಡುತ್ತಿದ್ದರು.
ನೃತ್ಯ ಶಾಲೆಯ ವಿದ್ಯಾರ್ಥಿಗಳಿಗೆ ನೃತ್ಯ ಪರೀಕ್ಷೆಗಳಲ್ಲಿ ಮೃದಂಗ ಸಹಕಾರ ನೀಡಿ ವಿದ್ಯಾರ್ಥಿಗಳಿಗೆ ನೆಚ್ಚಿನವರಾ ದರು. ಶಿರಸಿಗೆ ಪ್ರಖ್ಯಾತ ಕಲಾವಿದರ ನೃತ್ ಪ್ರದರ್ಶನಗಳನ್ನು ಏರ್ಪಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿರುತ್ತಿತ್ತು.
ನಟರಾಜ ನೃತ್ಯ ಶಾಲೆಯ ಕಾರ್ಯಕ್ರಮಗಳು ನಡೆಯುವಲ್ಲೆಲ್ಲ ಅವ ಅಗತ್ಯತೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಅವರು ಕಲಾಸೇವೆಯಲ್ಲಿ ತಲ್ಲಿನ ರಾಗಿದ್ದರು. ಈ ಕಲಾರಾಧನೆಯಲ್ಲಿಯೇ ಲೀನವಾಗಿ ಹೋದ ಅವರ ನೆನಪು ಹಾಗೂ ಅವರ ಆಶಯವನ್ನು ಹಸಿರಾಗಿ ಇಡುವುದಕ್ಕೋಸ್ಕರ ಭಾಗ್ವತ ಕಲಾ ಸಂರಮ ಮತ್ತು ಭಾಗ್ವತ ಕಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂದರ್ಭದಲ್ಲಿ ವಿ. ದೀಪಾ ಭಾಗ್ವತ ಅವರಿಂದ ನೃತ್ಯಾರ್ಪಣ ಕಾರ್ಯಕ್ರಮವು ಆಯೋಜನೆಗೊಂಡಿದೆ. ನಗರದ ಟಿ ಆರ್ ಸಿ ಬ್ಯಾಂಕ್ ಸಭಾಂಗಣದಲ್ಲಿ ಅಕ್ಟೋಬರ್ 13ರ ಸಂಜೆ 5 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸುಯೋಗ ವೃದ್ಧಾಶ್ರಮದ ಲತಿಕಾ ಭಟ್ಟ, ಸಾಮಾಜಿಕ ಕಾರ್ಯಕರ್ತ ವಿ.ಪಿ. ಹೆಗಡೆ ವೈಶಾಲಿ,, ನೃತ್ಯ ಗುರು ವಿ. ಸೀಮಾ ಭಾಗ್ವತ ಮತ್ತು ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ . ಕಲಾಸಕ್ತರು ಪಾಲ್ಗೊಳ್ಳಬೇಕು ಎಂದು ಸಂಘಟಕರು ವಿನಂತಿಸಿದ್ದಾರೆ.