ಸುದ್ಧಿಕನ್ನಡ ವಾರ್ತೆ
Goa: ಗೋವಾ ಪೋಲಿಸರು RSS ಮಾಜಿ ಸಂಘಚಾಲಕ ಸುಭಾಷ್ ವೇಲಿಂಗಕರ್ ಗಾಗಿ ಗೋವಾ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಇದುವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ವೆಲಿಂಗಕರ್ ಅವರು ಜಿಲ್ಲಾ ಸತ್ರ ನ್ಯಾಯಾಲಯದ ಆದೇಶವನ್ನು ಇನ್ನೂ ಹೈಕೋರ್ಟ್‍ನಲ್ಲಿ ಪ್ರಶ್ನಿಸಿಲ್ಲ. ಅವರು ತಮ್ಮ ಮುಂದಿನ ನಡೆಯನ್ನು ನಿಗೂಢವಾಗಿಟ್ಟಿದ್ದಾರೆ.
ಜಿಲ್ಲಾ ಸತ್ರ ನ್ಯಾಯಾಲಯದ ಪ್ರೊ. ಸುಭಾಷ್ ವೆಲಿಂಗಕರ್ ಅವರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಸೋಮವಾರ ತಿರಸ್ಕರಿಸಿದ ನಂತರ, ಪೊಲೀಸರು ಅವರಿಗಾಗಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ವೆಲಿಂಗಕರ್ ರವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅವರ ಪತ್ತೆಗೆ ಹಲವು ಪೊಲೀಸ್ ತಂಡಗಳನ್ನು ನೇಮಿಸಲಾಗಿದೆ.
ಡಿಚೋಲಿ ಪೊಲೀಸರ ಮುಂದೆ ಹಾಜರಾಗುವಂತೆ ಎರಡು ನೋಟಿಸ್‍ಗಳನ್ನು ಧಿಕ್ಕರಿಸಿದ್ದರಿಂದ ಸುಭಾಷ್ ವೆಲಿಂಗ್ಕರ್ ಅವರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ವೀಕ್ಷಣಾ ನ್ಯಾಯಾಲಯವು ತೀರ್ಪಿನಲ್ಲಿ ದಾಖಲಿಸಿದೆ.
ಏನಿದು ಪ್ರಕರಣ…?
ಗೋವಾದ ಆರ್ ಎಸ್ ಎಸ್ ಮಾಜಿ ಸಂಘಚಾಲಕ ಸುಭಾಷ ವೇಲಿಂಗಕರ್ ರವರು ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ರವರ ಶವದ ಡಿಎನ್ ಎ ತಪಾಸಣೆ ನಡೆಸಬೇಕು ಎಂದು ನೀಡಿರುವ ಹೇಳಿಕೆ ಕಳೆದ ಕೆಲ ದಿನಗಳ ವಾದ ವಿವಾದಕ್ಕೆ ಕಾರಣವಾಗಿದೆ. ಗೋವಾ ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ವೇಲಿಂಗಕರ್ ವಿರುದ್ಧ ಕ್ರೈಸ್ತ ಸಮದಾಯ ಪ್ರಕರಣ ದಾಖಲಿಸಿದೆ.