ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಶೇವಾಳಿ ಗ್ರಾಮದ ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ,ನಾಟಕ,ಯಕ್ಷಗಾನ,ಜಾನಪದ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿರುವ ಕಲಾವಿದೆ ಸುಮಂಗಲಾ ದೇಸಾಯಿಯವರು ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ)ಹೂವಿನ ಹಡಗಲಿ ಇವರ ವತಿಯಿಂದ ನೀಡುವ ಕನ್ನಡ ಕೋಗಿಲೆ-೨೦೨೬ ರ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಫೆಬ್ರುವರಿ 2 ರಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ ವತಿಯಿಂದ ನಡೆಯುವ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಈ ಪ್ರಶಸ್ತಿಗೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಪೂಜಾ ಕುಲಕರ್ಣಿ,ಲಲಿತ ಸಿದ್ದಿ,ಪ್ರಶಾಂತ ಕುಲಕರ್ಣಿ,ರಾಮನಾಥ ನಾಯ್ಕ ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳ ಎಲ್ಲಾ ಸೇರಿ 22 ಕಲಾವಿದರಿಗೂ ಕನ್ನಡ ಕೋಗಿಲೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಸಂಸ್ಥಾಪಕ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿಯವರು ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುತ್ತಾರೆ.
