ಸುದ್ದಿ ಕನ್ನಡ ವಾರ್ತೆ

ಕಾರವಾರ.ಜೆಡಿಎಸ್ ಮುಖಂಡೆಯ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ  ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದ್ರ ದಲ್ಲಿ ಘಟನೆ ನಡೆದಿದೆ.

ರಿಶೇಲ ಡಿಸೋಜಾ (20) ನೇಣು ಬಿಗಿದುಕೊಂಡು ಆತ್ಮಹತ್ಯೆ ಎಂಬ ಯುವತಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಾರವಾರದ ಕದ್ರಾ ಗ್ರಾಮದ ಕೆಪಿಸಿಎಲ್ ಕಾಲನಿಯಲ್ಲಿನ ನಿವಾಸದಲ್ಲಿ ಘಟನೆ ನಡೆದಿದೆ.

ಚಿರಾಗ್ ಚಂದ್ರಹಾಸ ಕೋಠಾರಕರ ವಿರುದ್ದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿರಾಗ್ ಕೋಠಾರಕರ ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ ಪುತ್ರ.

ಚಿರಾಗ್ ಕೋಠಾರಕರ ವಿರುದ್ದ ಮೃತಳ ತಂದೆ ಕ್ರಿಸ್ತೊದ್ ಡಿಸೋಜಾ ದೂರು ಸಲ್ಲಿಸಿದ್ದಾರೆ.

ಚಿರಾಗ್ ಕಳೆದ ಕೆಲ ದಿನಗಳಿಂದ ಮ್ರತ ರಿಶೇಲ ಮನೆ ಬಳಿ ಬಂದು ಹೋಗುತ್ತಿದ್ದ ಎನ್ನಲಾಗಿದೆ.ಇತ್ತಿಚ್ಚಿಗೆ ತನ್ನ ಪ್ರೀತಿಸುವಂತೆ ರಿಶೇಲ ಗೆ ಚಿರಾಗ್ ಪಿಡಿಸುತ್ತಿದ್ದ . ಆದರೆ ಚಿರಾಗ್ ನ ಪ್ರೀತಿ ಯನ್ನು ರಿಶೇಲ ಡಿಸೋಜಾ‌ ನಿರಾಕರಿಸಿದ್ದರು.

ತನ್ನ ಪ್ರೀತಿ ನಿರಾಕರಿಸಿದ ನೀನು ಇದ್ರು ಸತ್ತ ಹಾಗೆ ಬೇಗ ಸತ್ತು ಹೋಗೆಂದು ಚಿರಾಗ್ ಪಿಡಿಸುತ್ತಿದ್ದ . ಈತ ಕಳೆದ ಕೆಲ ದಿನಗಳಿಂದ ನಿರಂತರ ಕಿರುಕುಳ ನೀಡುತ್ತಿದ್ದ .

ಕದ್ರಾ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ಡಿಸೋಜಾ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಕದ್ರಾ ಪೊಲೀಸರು ಹೆಚ್ಚಿನ ತನಿಕ ಕಾರ್ಯ ಕೈಗೆತ್ತಿಕೊಂಡಿದ್ದಾರೆ.