ಸುದ್ಧಿಕನ್ನಡ ವಾರ್ತೆ
ಪಣಜಿ: ಆರ್ ಎಸ್ ಎಸ್ ನ ಮಾಜಿ ಗೋವಾ ಸಂಘಚಾಲಕ ಪ್ರೊ.ಸುಭಾಷ್ ವೇಲಿಂಗಕರ್ ವಿರುದ್ಧದ ಗೋವಾ ಕ್ರಿಶ್ಚಿಯನ್ ಸಮುದಾಯ ಕೋಪವು ಮಾಪ್ಸಾದಲ್ಲಿ ಪ್ರತಿಧ್ವನಿಸಲಾರಂಭಿಸಿದೆ. ವೇಲಿಂಗಕರ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮಾಪ್ಸಾ ಪೋಲಿಸರಿಗೆ ಕ್ರೈಸ್ತ ಸಮುದಾಯ ಮನವಿ ಮಾಡಿದೆ. ವೇಲಿಗಕರ್ ರವರು ನೀಡಿರುವ ಹೇಳಿಕೆಯು ಗೋವಾದಲ್ಲಿ ಕ್ರೈಸ್ತ ಸಮುದಾಯದ ತೀವ್ರ ಆಕ್ರೋಷಕ್ಕೆ ಕಾರಣವಾಗಿದೆ.

ಸಮಾಜದಲ್ಲಿ ವೈಷಮ್ಯ ಸೃಷ್ಠಿಸಲು ಜನರಲ್ಲಿ ಅಸಮಾಧಾನ ಮೂಡಿಸಲು ಮತ್ತು ಸಮಾಜದಲ್ಲಿ ಶಾಂತಿ ಕದಡಲು ವೇಲಿಂಗಕರ್ ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಕ್ರೈಸ್ತ ಸಮುದಾಯದ ಮುಖಂಡರು ಪೋಲಿಸರನ್ನು ಆಘ್ರಹಿಸಿದರು. ಪ್ರಮುಖರಾದ ಜಾನ್ ಲೋಬೊ, ಫ್ರಾನ್ಸಿಸ್ ಫರ್ನಾಮಡೀಸ್ ಮತ್ತಿತರರ ನೇತೃದಲ್ಲಿ ಉಪ ಪೋಲಿಸ್ ವರಿಷ್ಠಾಧಿಕಾರಿ ಸಂದೇಶ ಚೋಡಣಕರ್, ಇನ್ಸ ಪೆಕ್ಟರ್ ನಿಖಿಲ್ ಪಾಲೇಕರ್ ರವರ ಬಳಿ ಮನವಿ ಮಾಡಿದರು.

ಗೋವಾದ ಆರ್ ಎಸ್ ಎಸ್ ಮಾಜಿ ಸಂಘಚಾಲಕ ಸುಭಾಷ ವೇಲಿಂಗಕರ್ ರವರು ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ರವರ ಡಿಎನ್ ಎ ತಪಾಸಣೆ ನಡೆಸಬೇಕು ಎಂದು ನೀಡಿರುವ ಹೇಳಿಕೆ ಕಳೆದ ಕೆಲ ದಿನಗಳ ವಾದ ವಿವಾದಕ್ಕೆ ಕಾರಣವಾಗಿದೆ. ಗೋವಾ ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ವೇಲಿಂಗಕರ್ ವಿರುದ್ಧ ಕ್ರೈಸ್ತ ಸಮದಾಯ ಪ್ರಕರಣ ದಾಖಲಿಸಿದೆ.