ಸುದ್ದಿ ಕನ್ನಡ ವಾರ್ತೆ

– ಕಳೆದ 10 ವರ್ಷಗಳಲ್ಲಿ ಉಳವಿ ಅಭಿವೃದ್ಧಿ ಹೊಂದಿದೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥಮೋಕಾಶಿ

ಇಂದು ಉಳವಿಯಲ್ಲಿ ಗ್ರಾಮ ಪಂಚಾಯತ ಸದಸ್ಯರು, ಸೇರಿ ತಮ್ಮ ಅಧಿಕಾರದ ಕೊನೆಯ ಸಭೆ ಅಧ್ಯಕ್ಷ ಮಂಜುನಾಥ್ ಮೊಕಾಶಿ ಅಧ್ಯಕ್ಷತೆ ಯಲ್ಲಿ ನಡೆಸಿ ಆಡಳಿತಾಧಿಕಾರಿ ಕೃಷಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಸುಂದರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತನಲ್ಲಿ ಗ್ರಾಮ ಪಂಚಾಯತದ ಅಭಿವೃದ್ಧಿ ಅಧಿಕಾರಿಗಳು ಕಳೆದ 5 ವರ್ಷ ಗಳಿಂದ ಸೇವೆ ಸಲ್ಲಿಸಿದ ಎಲ್ಲಾ ಗ್ರಾಮ ಪಂಚಾಯತ ಪ್ರತಿನಿಧಿಗಳಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಬೀಳ್ಕೋಡುಗೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೋಕಾಶಿ ಕಳೆದ 10 ವರ್ಷಗಳಲ್ಲಿ ಶಾಸಕ ಆರ್ ವಿ ದೇಶಪಾಂಡೆ ಅವರ ಆಶೀರ್ವಾದದಿಂದ ಉಳವಿ ಸಂಪೂರ್ಣ ಅಭಿವೃದ್ಧಿ ಹೊಂದಿದೆ, ರಥಬೀದಿ, ಕುಡಿಯುವ ನೀರು, ಅಂಡರ್ ಗ್ರೌಂಡ್ ಕರೆಂಟ್ , ಆಸ್ಪತ್ರೆ, ಶಾಲೆ ಸೇರಿದಂತೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇವೆ, ಚೆನ್ನಬಸವಣ್ಣನ ಪುಣ್ಯಭೂಮಿ ಇದಾಗಿದ್ದು ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸಲು ಅವಕಾಶ ನೀಡಿದ ಉಳವಿ ಗ್ರಾಮ ಪಂಚಾಯತದ ಜನತೆಗೆ ಅಭಿನಂದನೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಸದಸ್ಯರಾದ ಜುಬೇರ ಶೇಖ್, ವಿಷ್ಣು ಬಿರಂಗತ್, ಮಂಗಲಾ ಮಿರಾಶಿ, ಮಂಜುಳಾ ವಸ್ತ್ರದ ,ಲಕ್ಷ್ಮೀ ಸಿದ್ದಿ,ಡಿ ಆರ್ ಗೌಡ ,ಉಳವಿಯ ಪ್ರಧಾನ ಅರ್ಚಕರಾದ ಶಂಕರಯ್ಯ ಕಲ್ಮಠ, ಹಿರಿಯರಾದ ಗೋಪಾಲ ಭಟ್,ಇಸ್ಮಾಯಿಲ್ ಮುಲ್ಲಾ, ರಮೇಶ ಪಡಸಲಗಿ,ವೆಂಕಣ್ಣ ಗೌಡ, ಗ್ರಾಮ ಪಂಚಾಯತಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.