Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಸಮಾಜದಲ್ಲಿ ನಾವೆಲ್ಲರೂ ತಮ್ಮ ತಮ್ಮ ಜಾತಿಗಳಿಡೆ ಅಂಟಿಕೊಳ್ಳದೆ, ನಾವೆಲ್ಲರೂ ಒಂದೆ ಎನ್ನುತ್ತಾ ಎಲ್ಲಾ ಜಾತಿ ಧರ್ಮವನ್ನು ಗೌರವಿಸಿ ದೇವರಲ್ಲಿ ಶೃದ್ದೆ, ಭಕ್ತಿ ಇಟ್ಟು ಮಾನವರಾಗಿ ಬದುಕಬೇಕೆಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕರಾದ ಆರ್. ವಿ. ದೇಶಪಾಂಡೆ ಹೇಳಿದರು.

Banner Ad

ಅವರು ಜೋಯಿಡಾ ತಾಲೂಕಿನ ರಾಮನಗರದಲ್ಲಿ ಸರಕಾರದ ಪ್ರಸಕ್ತ ಹಣಕಾಸು ವರ್ಷದ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅನುಮೋದಿಸಲಾದ ಶ್ರೀ ತುಳಜಾ ಭವಾನಿ ದೇವಾಲಯ ನವೀಕರಣ ಮತ್ತು ಕ್ಷತ್ರಿಯ ಮರಾಠಾ ಸಮಾಜದ ಸಮೂದಾಯ ಭವನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ದೇವರ ಕಾರ್ಯಕ್ಕೆ ಸರಕಾರದ ಅನುದಾನಕ್ಕೆ ಅವಲಂಬಿಸದೇ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲರು ಕೈಜೋಡಿಸಬೇಕೆಂದು ಕರೆನೀಡಿದರು.
ಮಾತಾ ತುಳಜಾ ಭವಾನಿ ದೇವಾಲಯ ನವೀಕರಣಕ್ಕೆ ರೂ. 20 ಲಕ್ಷ, ಹಾಗೂ ಕ್ಷತ್ರೀಯ ಮರಾಠಾ ಸಮಾಜದ ಸಮೂದಾಯ ಭವನಕ್ಕೆ ರೂ. 20 ಲಕ್ಷ ಅನೂದಾನವನ್ನು ಶಾಸಕರು ಮಂಜೂರಿ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವೇದಾಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಜಿ ಗವಿಪುರಂ ಬೆಂಗಳೂರು ಆಶಿರ್ವಚನ ನೀಡುತ್ತಾ, ಭಾರತಿಯ ಸಂಸ್ಕೃತಿ ಹಾಗೂ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠವಾದುದು, ಇದನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಒಂದಾಗಿ, ಗೌರವದಿಂದ ಬಾಳಬೇಕೆಂದರು.
ಈ ಸಂದರ್ಭದಲ್ಲಿ ಕ್ಷತ್ರೀಯ ಮರಾಠಾ ಪರಿಷತ್ತಿನಿಂದ ಆಮಂತ್ರಿತರಾದ ವಾರಕರಿ ಸಂಪ್ರದಾಯದ ಸಂತರನ್ನು ವೇದಿಕೆಯಲ್ಲಿ ಶಾಸಕರು ಹಾಗೂ ಸ್ವಾಮಿಗಳು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರ ಧರ್ಮಪತ್ನಿ ಶ್ರೀಮತಿ ರಾಧಾಬಾಯಿ ದೇಶಪಾಂಡೆ, ಕ್ಷತ್ರಿಯ ಮರಾಠಾ ಪರಿಷತ್ತು ಅಧ್ಯಕ್ಷರ ವಿ. ಜಿ. ದೇಸಾಯಿ, ಕಾರ್ಯದರ್ಶಿ ಮಲ್ಲಾರ ರಾಣೆ, ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ, ಕೆ. ಪಿ. ಸಿ. ಸಿ. ಸದಸ್ಯ ಸದಾನಂದ ದಬಗಾರ, ಮಾಜಿ ಜಿ. ಪಂ. ಸದಸ್ಯ ಸಂಜಯ ಹಣಬರ, ವಿಜಯ ಪಂಡಿತ, ಕೃಷ್ಣಾ ದೇಸಾಯಿ, ಜಿ. ಜಿ. ಗಾಂದಲೆ, ಮುಂತಾದವರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಊರನಾಗರಿಕರು, ಭಕ್ತರು ಪಾಲ್ಗೊಂಡಿದರು.

Banner Ad