ಸುದ್ದಿ ಕನ್ನಡ ವಾರ್ತೆ
ತಾಲೂಕಿನಲ್ಲಿ ಈಗ ಅಡಿಕೆ ಕೊಯ್ಲಿನ ಭರಾಟೆ, ಯಾರ ಮನೆಯಲ್ಲಿ ನೋಡಿದರೂ ಅಡಿಕೆ ಕೊಯ್ಲಿನ ಮಾತೇ ಮಾತುಗಳು, ಆಳುಗಳಿಲ್ಲ ಆಳುಗಳ ಕೊರತೆ ಯಾಗಿದೆ. ನಾವೆಲ್ಲಸೇರಿ ಮುರಿಯಾಳಿನಿಂದ ಅಡಿಕೆ ಸುಲಿಯುತ್ತಿದ್ದೇವೆ ನಿಮ್ಮ ಕೊನೆ ಕೊಯ್ಲು ಮುಗಿಯಿತೇ? ನಮ್ಮ ಊರಲ್ಲಿ ಇನ್ನೂ ಕೊನೆಕೊಯ್ಲು ಮುಗಿದಿಲ್ಲ, ಚಳಿ ಬೇರೆ ಎಂಬ ಮಾತುಗಳೇ ಎಲ್ಲರ ಬಾಯಲ್ಲಿ ಕೇಳಿ ಬರುವ ಒಂದು ಸೀಜನ್ ಎಂದರೆ ಈ ಅಡಿಕೆ ಕೊನೆ ಕೊಯ್ಲಿನ ಕಾಲ.

ಹೌದು ಎಲ್ಲರ ಚಿತ್ತ ಈಗ ತಮ್ಮ ಹೊಟ್ಟೆ ಬದುಕಿನತ್ತ ಸಾಗಿದೆ, ಈ ಸಮಯ ಅತ್ಯಂತ ಕಠಿಣ ಮತ್ತು ಅಷ್ಟೇ ಜವಾಬ್ದಾರಿಯ ಕಾಲ ಸಮಯವನ್ನು ಸರಿಯಾಗಿ ಬಳಸಿಕೊಂಡು ಕೊನೆ ಕೊಯ್ಲು ಮುಗಿಸಿ ಕೊಳ್ಳು ವತ್ತ ಜನತೆ ಬಿಝಿ ಆಗಿದ್ದು ಕೆಲವು ರೈತರು ತಮ್ಮ ಬತ್ತ ಒಕ್ಕಣೆಯನ್ನು ಮಾಡುತ್ತಿದ್ದಾರೆ, ಏನೇ ಆದರೂ ಈ ಸಮಯ ಆನಂದಮಯ ಎಂದು ತಮ್ಮ ತಮ್ಮೊಳಗೆ ಸೇರಿ ಮುರಿಯಾಳು, ಲೆಕ್ಕದ ಆಳು, ಮತ್ತು ಸುಲಿದ ಅಡಿಕೆ ತೂಕದ ಆಳು ಗಳು ಎಂದು ಅಡಿಕೆ ಕೆಲಸಕ್ಕೆ ತಮ್ಮನ್ನು ತೊಡಗಿಸಿ ಕೊಂಡಿದ್ದು ಇನ್ನೂ ತಿಂಗಳುಗಳ ಕಾಲ ಅಡಿಕೆ ಕೆಲಸ ದಲ್ಲಿ ನಿರತ ರಾಗಿರುತ್ತಾರೆ ಏನಿದು ಮುರಿಯಾಳು ಅಂತೀರಾ? ಹಿಂದಿನ ಕಾಲದಲ್ಲಿ ಅಕ್ಕ ಪಕ್ಕ ದವರೆಲ್ಲ ಸೇರಿ ಈ ದಿನ ನನ್ನ ಕೆಲಸ ನಾಳೆ ಅವನ ಕೆಲಸ ಎಂದು ಒಂದೊಂದು ದಿನ ಒಬ್ಬರ ಕೆಲಸಕ್ಕೆ ಯಾವುದೇ ಕೆಲಸ ಇದ್ದರೂ ಹೋಗಿ ಕೆಲಸ ಪೂರೈಸಿದ ಮೇಲೆ ಯಾರ್ಯಾರ ಮನೆಗೆ ಯಾರ್ಯಾರು ಹೋಗಿದ್ದರು ಎಂದು ತಮ್ಮ ತಮ್ಮ ಆಳಿನ ಲೆಕ್ಕ ಕಳೆದು ಉಳಿದ ಆಳಿಗೆ ಇಂತಿಷ್ಟು ಎಂದು ಲೆಕ್ಕ ಕೊಡುವ ಪದ್ಧತಿ ಇತ್ತು.

ಈಗಲೂ ಕೆಲವರು ಆ ಪದ್ದತಿಯನ್ನು ಇಟ್ಟು ಕೊಂಡಿದ್ದಾರೆ ಅದೇ ಮುರಿಯಾಳು ಎಂದು ಕರೆಸಿ ಕೊಳ್ಳುತ್ತಿದೆ ಇದು ಗ್ರಾಮಸ್ಥರ ಪ್ರೀತಿ ವಿಶ್ವಾಸ ವನ್ನು ಹೆಚ್ಚಿಸುತ್ತದೆ ಅಂತ ಸ್ಥಳ ಗಳಿಗೆ ಅಪರಿಚಿತರು ಬೇಕಾ ಬಿಟ್ಟಿ ಓಡಾಡಲು ಹೆದರುತ್ತಾರೆ ಮತ್ತು ಅಂತ ಊರುಗಳಲ್ಲಿ ಒಕ್ಕಟ್ಟು ತುಂಬಿರುತ್ತದೆ ಜೋಯಿಡಾ ತಾಲೂಕು ಇದಕ್ಕೆಲ್ಲ ಮಾದರಿ ಯಾಗಿದೆ, ಆ ಕಾರಣದಿಂದ ತಾಲೂಕು ಈಗ ಸಾವಯವ ತಾಲೂಕಾಗುವತ್ತ ದಾಪುಗಾಲನ್ನು ಇಟ್ಟಿರುವುದು ಹೆಮ್ಮೆಯ ವಿಷಯ ವಾಗಿದೆ.
