ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಣಶಿ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕಾ ಅಭಿಯಾನಕ್ಕೆ ಗಣ್ಯರು ದೀಪ ಪ್ರಜ್ವಲನ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪೋಲಿಯೋ ಲಸಿಕಾ ಅಭಿಯಾನದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಣಶಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಲಕ್ಷ್ಮಣ ಬರ್ಸೇಕರ, ವೈದ್ಯಾಧಿಕಾರಿಗಳಾದ ಡಾ.ನಾಗರಾಜ ಜಾವೂರ, ಸಿ.ಹೆಚ್.ಒ ಅಮೀತಾ ಹಂಡ್ರಗಲ್, ಆರೋಗ್ಯ ಸಹಾಯಕಿ ಮೀನಾಕ್ಷಿ ಬಾಂದೇಕರ,ಅಂಗನವಾಡಿ ಕಾರ್ಯಕರ್ತೆಯರಾದ ಸುಮನ ಮುಸ್ಕಾರ,ದೀಪಾ ನಾಯ್ಕ,ಆಶಾ ಕಾರ್ಯಕರ್ತೆ ದೀಪಾ ದೇಸಾಯಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕಿದರು.ಈ ಸಂದರ್ಭದಲ್ಲಿ ಮಾತೆಯರು ತಮ್ಮ ಮಕ್ಕಳೊಂದಿಗೆ ಇದ್ದರು.
