ಸುದ್ದಿ ಕನ್ನಡ ವಾರ್ತೆ

ಕಾರವಾರ:ಸ್ವದೇಶಿ ಜಾಗೃತಿಗಾಗಿ ಯೂತ್ ಫಾ‌ರ್ ನೇಷನ್, ಸ್ವದೇಶಿ ಜಾಗರಣ ಸಹಯೋಗದಲ್ಲಿ ಆಯೋಜಿಸಿರುವ ಸ್ವದೇಶಿ ಉದ್ಯಮ ಜಾಗೃತಿ ಮಿಷನ್ ಅಡಿಯಲ್ಲಿ 3,600 ಕಿ.ಮೀ ಸೈಕಲ್ ಜಾಥಾ ಇಂದು ಅಂಕೋಲಾಗೆ ಬಂದು ತಲುಪಿದ್ದು ಜೈ ಹಿಂದ್ ಸರ್ಕಲ್ ನಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ಸ್ವದೇಶಿ ಬಳಸಿ ದೇಶ ಉಳಿಸಿ ಎಂಬ ಸಂದೇಶದೊಂದಿಗೆ 60ರಿಂದ 70ವರ್ಷ ಮೇಲ್ಪಟ್ಟ ಸೈಕಲಿಸ್ಟ್‌ಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವಂತೆ 3600 ಕಿಮೀ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

‘ಸ್ವದೇಶಿ ಬಳಸಿ ದೇಶ ಬೆಳೆಸಿ’ ಎಂಬ ಘೋಷವಾಕ್ಯದಡಿ, ಸಾಫ್ಟ್‌ವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯೋಪಯೋಗಿ ವಸ್ತುಗಳ ತನಕ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ Narendra Modi ಜೀ ಅವರ ‘ಸ್ವದೇಶಿ ಎಂಬುದು ಪ್ರತಿಯೊಬ್ಬರ ಜೀವನದ ಮಂತ್ರವಾಗಬೇಕು’ ಎಂಬ ಕರೆಯಂತೆ ಸ್ವದೇಶಿ ತತ್ವವನ್ನು ಹೆಮ್ಮೆಯಿಂದ ಅಪ್ಪಿಕೊಳ್ಳಬೇಕು.