ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಕರ್ನಾಟಕ ಪ್ರಾಂತ ರೈತ ಸಂಘ ಜೊಯಿಡಾ ಇವರು ವಿವಿಧ ಬೇಡಿಕೆ ಗಳನ್ನು ಮುಂದಿಟ್ಟು ತಹಶೀಲ್ದಾರ್ ಕಛೇರಿ ಮುಂದೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದನ್ನು ಅಂತ್ಯ ಗೊಳಿಸಿದ್ದಾರೆ,

ಈ ಬಗ್ಗೆ ತಾಲೂಕಾ ಆಡಳಿತ ದಿಂದ ಲಿಖಿತ ಪತ್ರ ಪಡೆದು ಸತ್ಯಾಗ್ರಹ ಅಂತ್ಯ ಗೊಳಿಸಲು ರೈತ ಸಂಘ ದವರು ನಿರ್ಧರಿಸಿದ್ದೇವೆ ಎಂದು ಅಧ್ಯಕ್ಷ ಪ್ರೇಮಾನಂದ ವೇಳಿಫ್ ಮಂಗಳವಾರ ಸಂಜೆ ತಿಳಿಸಿದರು ಸೋಮವಾರ ಕಿರವತ್ತಿಯಿಂದ 11 ಕಿ.ಮಿ ಪಾದಯಾತ್ರೆ ಮಾಡಿ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ನೀಡಿ ಬೇಡಿಕೆ ಈಡೇರಿಸಲು ಒತ್ತಾಯಿಸಿ ಹಗಲು ರಾತ್ರಿ ನಿರಂತರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಾಲೂಕಾ ಆಡಳಿತ ಪ್ರಾಂತಿಯ ರೈತ ಸಂಘ ದವರ ಬೇಡಿಕೆ ಯನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಸಹಮತ ವ್ಯಕ್ತ ಪಡಿಸಿ ಬೇಡಿಕೆ ಈಡೇರಿಸುವ ಭರವಸೆ ಪತ್ರ ನೀಡಿದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡದೇ ಇದ್ದರೆ ಶಾಸಕರ ಮನೆವರೆಗೆ ಪಾದಯಾತ್ರೆ ನಡೆಸಿ ಅಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವದು ಎಂದು ಅಧ್ಯಕ್ಷ ಪ್ರೇಮಾನಂದ ವೇಳಿಫ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ,ದಿವ್ಯಾ ನಾಯ್ಕ ನಾಗೊಡಾದ ದಿಗಂಬರ ದೇಸಾಯಿ ಪ್ರಮುಖರಾದ ವಿಕಾಸ ವೇಳಿಪ, ಸಂತೋಷ ವೇಳಿಪ, ಜಯಂತ ವೇಳಿಪ, ಮಾಬಳು ಕುಂಡಲಕರ, ಕೃಷ್ಣಾ ಮಿರಾಶಿ, ದಯಾನಂದಕುಮಗಾಳಕಾರರಾಜೇಶ್ ಗಾವಡಾ ಸೇರಿದಂತೆ ನೂರಾರು ಜನರು ಇದ್ದರು