ಸುದ್ದಿ ಕನ್ನಡ ವಾರ್ತೆ

ಹಳಿಯಾಳ ತಾಲೂಕಿನ ಯಡೊಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾರುತಿ
ದೇವಸ್ಥಾನ ದಲ್ಲಿ ಇಂದು ಜರುಗಿದ ಮೂರ್ತಿ ಪ್ರತಿಷ್ಠಾಪನಾ ಹಾಗೂ ಕಳಸಾರೋಹಣದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರು ಭಾಗವಹಿಸಿ, ಶ್ರೀ ಮಾರುತಿ ದೇವರ ದರ್ಶನ ಪಡೆದು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಕೊಡುಗೆಯಾಗಿ 55,000 (ಐವತ್ತೈದು ಸಾವಿರ) ರೂಪಾಯಿಗಳ ದೇಣಿಗೆಯನ್ನು ಸಮರ್ಪಿಸಿದರು.

ಶ್ರೀ ಮಾರುತಿ ದೇವರ ಆಶೀರ್ವಾದದಿಂದ ಗ್ರಾಮದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆ ಸದಾ ನೆಲೆಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಹರಿದಾಸ ಬೊಬ್ಲಿ, ಸಂಜಯ ಹಿರೇಕರ, ಮಾರುತಿ ಪೆಟ್ನಕರ, ವಿಠ್ಠಲ ಕೊಡ್ಲಿ, ಸಹದೇವ ಢೇಪಿ, ಸಂತೋಷ್ ಬುಲಬುಲೆ, ಪಾಂಡು ಪಾಟೀಲ್, ಕೇಮಶು ವಡ್ಡರ, ಯಲ್ಲಪ್ಪ ಮಿರಾಶಿ, ದೇವದಾಸ ಗೌಡ, ಮಹದೇವ ಹಳಬರ, ಸೊಮನಿಂಗ ಬೊಬ್ಲಿ, ಮನೋಹರ ಬೊಬ್ಲಿ, ರಾಮದಾಸ್ ಮೋರಿ, ರಮೇಶ್ ಸುತಾರ ಹಾಗೂ ಗ್ರಮದ ಹಿರಿಯರು ಉಪಸ್ಥಿತರಿದ್ದರು.