ಸುದ್ದಿ ಕನ್ನಡ ವಾರ್ತೆ
ಶಿರಸಿ:ರಸ್ತೆ ಅಪಘಾತದಿಂದ ತೀವ್ರ ಅನಾರೋಗ್ಯಗೊಂಡು ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬನವಾಸಿ ಸಮೀಪದ ಸೋಮನಳ್ಳಿಯ ಚಿನ್ಮಯ ಗುರುನಾಥ ಹೆಗಡೆ ಅವರ ಆರೋಗ್ಯ ಸುಧಾರಣೆಗೆ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

23 ವರ್ಷದ ಚಿನ್ಮಯ ಗುರುನಾಥ ಹೆಗಡೆ ಹೋಟೇಲ್ ಮ್ಯಾನೆಜ್ಮೇಂಟ್ ತರಬೇತಿ ಪಡೆದು ಬೆಂಗಳೂರಿನಲ್ಲಿ ಕಷ್ಟ ಪಟ್ಟು ಉದ್ಯೋಗ ಮಾಡಿಕೊಂಡಿದ್ದ ಅವರಿಗೆ ಸೆಪ್ಟೆಂಬರ್ ನಲ್ಲಿ ಅಲ್ಲಿನ ಬನ್ನೇರುಘಟ್ಟ ಬಳಿ ರಸ್ತೆ ಅಪಘಾತ ಸಂಭವಿಸಿತ್ತು. ಅಪಘಾತದಿಂದ ಲಿವರ್ ಹಾಗೂ ಒಂದು ಕಿಡ್ನಿ ನಿಷ್ಕ್ರಿಯ ಗೊಂಡಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ತಿಂಗಳು ಗಟ್ಟಲೆ ಚಿಕಿತ್ಸೆ ಪಡೆದಿದ್ದು ಈಗಾಗಲೇ ಸುಮಾರು 15 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಇನ್ನೂ ಚಿಕಿತ್ಸೆ ಮುಂದುವರೆಯುತ್ತಿದ್ದು ಸುಮಾರು 5 ಲಕ್ಷ ಹಣ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಚಿನ್ಮಯ ಹೆಗಡೆ ಅವರ ತಂದೆ ಗುರುನಾಥ ಹೆಗಡೆ ಅವರು ಮಗನ ಚಿಕಿತ್ಸೆಗೆ ಇನ್ನೂ ಲಕ್ಷಾಂತರ ಹಣ ಹೊಂದಿಸುವುದು ಹೇಗೆ ಎಂದು ತಿಳಿಯದೆ ದಿಕ್ಕು ತೊಚದಂತೆ ಕುಳಿತಿದ್ದಾರೆ.
ಆರ್ಥಿಕವಾಗಿ ಸದೃಢರಲ್ಲದ ಚಿನ್ಮಯ ಹೆಗಡೆ ಯವರ ಆರೋಗ್ಯ ಚೇತರಿಕೆಗೆ ನಾವೆಲ್ಲರೂ ನಮ್ಮ ಕೈಲಾದ ಸಹಾಯ ಹಸ್ತ ಚಾಚುವ ಮೂಲಕ ಯುವಕನ ಭವಿಷ್ಯಕ್ಕೆ ನೆರವಾಗೋಣ ಎಂದು ಅನಂತಮೂರ್ತಿ ಹೆಗಡೆ ವಿನಂತಿಸಿದ್ದಾರೆ.
ಸಹಾಯ ಹಸ್ತ ಚಾಚುವವರು ಫೋನ್ ಫೆ ಸಂಖ್ಯೆ 9483659824 ಅಥವಾ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ 619002120000402. ಐ ಎಫ್ ಎಸ್ ಸಿ ಸಂಖ್ಯೆ
UBIN0901164 ಗುರುನಾಥ ಶಂಕರನಾರಾಯಣ ಹೆಗಡೆ
ಗೆ ತಮ್ಮ ಸಹಾಯ ನೀಡಬಹುದಾಗಿದೆ.
