Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗಳ ವಿರುದ್ಧ ಕಳೆದ 10 ತಿಂಗಳಿಂದ ನಡೆಯುತ್ತಿರುವ ಜನ ಚಳವಳಿ ಇದೀಗ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳ ಬೆನ್ನಲ್ಲೇ ಆಗಸ್ಟ್ 26ರಂದು ಸಂಜೆ 4 ಗಂಟೆಗೆ ಸ್ವರ್ಣವಲ್ಲೀ ಮಠದಲ್ಲಿ ಬೇಡ್ತಿ–ಅಘನಾಶಿನಿ ಸಮಿತಿ ಸಭೆ ನಡೆಯಲಿದೆ.
ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಸಭೆಯನ್ನು ಕರೆದಿದ್ದು, ಚಾತುರ್ಮಾಸ್ಯ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಭೆ ಎಲ್ಲರ ಗಮನ ಸೆಳೆದಿದೆ. ಸಮಿತಿಯು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ.

Banner Ad

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನದಿ ಜೋಡಣೆ ಯೋಜನೆಗಳಿಗೆ ನಿಲುವು ವ್ಯಕ್ತಪಡಿಸಿರುವುದು, ಡ್ರೋನ್ ಸಮೀಕ್ಷೆಗೆ ಟೆಂಡರ್ ಕರೆದಿರುವುದು ಹಾಗೂ ಕಣಿವೆ ಪ್ರದೇಶದಲ್ಲಿ ಸಂಚಲನ–ಆತಂಕದ ವಾತಾವರಣ ನಿರ್ಮಾಣವಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಸಮಿತಿ ತಿಳಿಸಿದೆ.

Banner Ad