ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ಪಟ್ಟಣದ ಕೆಜಿಎಸ್ ಶಾಲೆಯ ಶಿಕ್ಷಕಿಯೊಬ್ಬರ ಮನೆಯ ಬಳಿ ಅತ್ಯಂತ ವಿಷಕಾರಿ ಕಟ್ಟು ಹಾವು (ಕಾಮನ್ ಕ್ರೈಟ್) ಪತ್ತೆಯಾಗಿ ಆತಂಕ ಮೂಡಿಸಿತು.

​ಕೆಜಿಎಸ್ ಶಾಲೆಯ ಶಿಕ್ಷಕಿ ಪೂರ್ಣಿಮಾ ನಾಯ್ಕ ಅವರ ಮನೆಯ ಬಳಿ ಈ ವಿಷಕಾರಿ ಹಾವು ಪತ್ತೆಯಾಗಿದ್ದು, ಸ್ಥಳೀಯರಾದ ಗಣೇಶ್ಚಂದ್ರ ಪಂಡರಪುರ ಅವರ ಮೂಲಕ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಕಟ್ಟು ಹಾವು ನಾಗರಹಾವಿಗಿಂತ ಐದು ಪಟ್ಟು ಹೆಚ್ಚು ವಿಷ ಹೊಂದಿದೆ.