Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಯುವ ಸಮುದಾಯದಲ್ಲಿ ಧಾರ್ಮಿಕ ನಂಬಿಕೆ ಭಾವನೆಗಳನ್ನು ಭದ್ರಪಡಿಸಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ತಾಲೂಕಿನ ಅನಗೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಮಹೋತ್ಸವದ ಸಂದರ್ಭದಲ್ಲಿ ನವೀಕರಣಗೊಂಡ ದೇವಾಲಯದ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Banner Ad

ಎಂತಹ ಸಂದರ್ಭದಲ್ಲಿಯೂ ಕಷ್ಟವನ್ನು ಎದುರಿಸುವ ಶಕ್ತಿ ಪಡೆಯಲು ನಾವು ದೇವರಲ್ಲೇ ಮೊರೆ ಹೋಗಬೇಕು ಎಂದ ಅವರು, ದೇವಸ್ಥಾನದ ರಸ್ತೆಯ ನಿರ್ಮಾಣಕ್ಕೆ ಸಾಧ್ಯವಾದ ಪ್ರಯತ್ನವನ್ನು

ಶಾಸಕರ ಜತೆಗೂಡಿ ಮಾಡುವ ಭರವಸೆ ನೀಡಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಎಲ್ಲರಿಗೂ ಧರ್ಮಶ್ರದ್ಧೆ ಮುಖ್ಯ. ಧರ್ಮದ ಕಾರ್ಯಗಳಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕೆಂದರು.
ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಮೊಕೇಸರ ಗಣಪತಿ ಮಾನಿಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಯಲ್ಲಾಪುರ ನಿರ್ವಹಿಸಿದರು.

Banner Ad