Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕ್ರೀಡಾಂಗಣದಲ್ಲಿ ದಿನಾಂಕ:3-04-2026 ರಿಂದ 5-04-2026 ಮೂರು ದಿನಗಳ ಕಾಲ ನಡೆದ ಜೋಯಿಡಾ ಗ್ರಾಮೀಣ ಪ್ರೀಮಿಯರ್ ಲೀಗ್- 1 ಪ್ರಥಮ ಪಂದ್ಯಾವಳಿಯು ಯಶಸ್ವಿಯಾಗಿ ಸಂಪನ್ನಗೊಂಡಿತು. ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಭಾನುವಾರ ನಡೆದ ಪಂದ್ಯಾವಳಿಯ ಅಂತಿಮ ಪೈನಲ್ ಪಂದ್ಯದಲ್ಲಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೀಕಾಂತ ಕಾಂಬ್ಳೆ ಮಾಲೀಕತ್ವದ ತ್ರೀಶೂಲ ಟೈಟನ್ಸ್ ತಂಡವು ರೋಯಲ್ ಸ್ಟೈಕರ್ಸ ತಂಡವನ್ನು 21 ರನ್‌ಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲ೦ಕರಿಸಿದರೆ,ರೋಯಲ್ ಸ್ಟೈಕರ್ಸ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಬಹುಮಾನ ವಿತರಣೆಯ ಸಂದರ್ಭದಲ್ಲಿ ಗಣ್ಯರಾದ ಪಿ.ವಿ. ದೇಸಾಯಿ ಸರ್ ,ಸಂತೋಷ ಮಂತೇರೋ,ವಿನಯ ದೇಸಾಯಿ, ದಿವಾಕರ ಕುಂಡಲಕರ,ಶ್ರೀಕಾಂತ ಕಾಂಬ್ಳೆ ಇನ್ನಿತರ ಗಣ್ಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

Banner Ad
Banner Ad